ADVERTISEMENT

ಅಸ್ಸಾಂ: ಚುನಾವಣೆಯಲ್ಲಿ ಬಳಸದ ಮತಯಂತ್ರ ಮತ ಎಣಿಕೆ ಕೇಂದ್ರದಲ್ಲಿ ಪತ್ತೆ

​ಪ್ರಜಾವಾಣಿ ವಾರ್ತೆ
Published 2 ಮೇ 2021, 6:15 IST
Last Updated 2 ಮೇ 2021, 6:15 IST
ಸಾಂದರ್ಭಿಕ ಚಿತ್ರ – ಪಿಟಿಐ
ಸಾಂದರ್ಭಿಕ ಚಿತ್ರ – ಪಿಟಿಐ   

ಗುವಾಹಟಿ: ಚುನಾವಣೆಯಲ್ಲಿ ಬಳಸದ ಮತಯಂತ್ರ ಮತ ಎಣಿಕೆ ಕೇಂದ್ರದಲ್ಲಿ ಪತ್ತೆಯಾದ ವಿದ್ಯಮಾನ ಅಸ್ಸಾಂನ ಹೈಲಾಕಂಡಿ ಜಿಲ್ಲೆಯಲ್ಲಿ ನಡೆದಿದೆ.

ಎಣಿಕೆ ಕೇಂದ್ರಲ್ಲಿ ಚುನಾವಣೆಯಲ್ಲಿ ಬಳಸದ ಮತ ಯಂತ್ರ ಇರುವುದು ತಿಳಿದ ಕೂಡಲೇ ಜಿಲ್ಲಾ ಚುನಾವಣಾಧಿಕಾರಿ ಮೇಘ ನಿಧೀ ದಹಲ್ ಅವರು ಮತಗಟ್ಟೆ ಅಧಿಕಾರಿಗಳ ಜತೆ ಅಲ್ಲಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.

ಪ್ರಾಥಮಿಕ ತನಿಖೆ ವೇಳೆ, ಮತ ಎಣಿಕೆ ಕೇಂದ್ರದಲ್ಲಿ ಪತ್ತೆಯಾಗಿರುವುದು ಚುನಾವಣೆ ದಿನ ಕಾದಿರಿಸಿದ್ದ ಮತಯಂತ್ರ ಎಂಬುದು ತಿಳಿದುಬಂದಿದೆ. ಚುನಾವಣೆಯ ದಿನ ಪ್ರಮಾದವಶಾತ್ ಅದನ್ನು ಎಣಿಕೆ ಕೇಂದ್ರಕ್ಕೆ ಸಾಗಿಸಲಾಗಿತ್ತು ಎಂದು ಪ್ರಕಟಣೆ ತಿಳಿಸಿದೆ.

ಮತಯಂತ್ರವನ್ನು ಅಭ್ಯರ್ಥಿಗಳ ಎದುರು ತೆರೆದು ತೋರಿಸಲಾಗಿದ್ದು, ದುರ್ಬಳಕೆ ಆಗಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಡಲಾಗಿದೆ. ಬಳಕೆಯಾಗದ ಮತಯಂತ್ರವನ್ನು ತಕ್ಷಣವೇ ಮತಯಂತ್ರಗಳನ್ನು ಕಾಯ್ದಿರಿಸುವ ಕೊಠಡಿಗೆ ಒಯ್ಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.