ADVERTISEMENT

ಅಸ್ಸಾಂ ಪ್ರವಾಹ: ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ 131 ಪ್ರಾಣಿಗಳು ಸಾವು

ಪಿಟಿಐ
Published 8 ಜುಲೈ 2024, 6:47 IST
Last Updated 8 ಜುಲೈ 2024, 6:47 IST
<div class="paragraphs"><p>ಪ್ರವಾಹದಲ್ಲಿ ಬ್ರಹ್ಮಪುತ್ರ ನದಿ ದಾಟಿ ಬಂದ ಆನೆ</p></div>

ಪ್ರವಾಹದಲ್ಲಿ ಬ್ರಹ್ಮಪುತ್ರ ನದಿ ದಾಟಿ ಬಂದ ಆನೆ

   

– ಪಿಟಿಐ ಚಿತ್ರ

ಗುವಾಹಟಿ: ಅಸ್ಸಾಂನಲ್ಲಿ ಉಂಟಾಗಿರುವ ಪ್ರವಾಹದಿಂದಾಗಿ ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ಕನಿಷ್ಠ 131 ಪ್ರಾಣಿಗಳು ಸಾವಿಗೀಡಾಗಿವೆ. 96 ಪ್ರಾಣಿಗಳನ್ನು ರಕ್ಷಿಸಲಾಗಿದೆ.

ADVERTISEMENT

ಮೃತಪಟ್ಟ ಪ್ರಾಣಿಗಳಲ್ಲಿ 6 ಘೇಂಡಾಮೃಗಗಳು ಹಾಗೂ 117 ಜಿಂಕೆಗಳು ಸೇರಿವೆ. ಈ ಪೈಕಿ 98 ಜಿಂಕೆಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಎರಡು ಜಿಂಕೆಗಳು ವಾಹನ ಡಿಕ್ಕಿ ಹೊಡೆದು ಸತ್ತಿವೆ. 17 ಜಿಂಕೆಗಳು ಚಿಕಿತ್ಸೆ ವೇಳೆ ಸಾವನ್ನಪ್ಪಿವೆ. ಒಟ್ಟು 25 ಪ್ರಾಣಿಗಳು ಚಿಕಿತ್ಸೆ ವೇಳೆ ಅಸುನೀಗಿವೆ.

85 ಜಿಂಕೆಗಳು, 2 ಘೇಂಡಾಮೃಗಗಳು, ಎರಡು ಸಾಂಬಾರ ಸೇರಿ 96 ಪ್ರಾಣಿಗಳನ್ನು ಅರಣ್ಯಾಧಿಕಾರಿಗಳು ರಕ್ಷಣೆ ಮಾಡಿದ್ದಾರೆ.

ಸದ್ಯ 25 ಪ್ರಾಣಿಗಳು ಚಿಕಿತ್ಸೆ ಪಡೆಯುತ್ತಿದ್ದು, 52 ಇನ್ನಿತರ ಪ್ರಾಣಿಗಳಿಗೆ ಚಿಕಿತ್ಸೆ ನೀಡಿ ಬಿಡುಗಡೆಗೊಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.