ADVERTISEMENT

ಅಸ್ಸಾಂ ಪ್ರವಾಹ: 24.50 ಲಕ್ಷ ಜನ ಬಾಧಿತರು

​ಪ್ರಜಾವಾಣಿ ವಾರ್ತೆ
Published 6 ಜುಲೈ 2024, 13:18 IST
Last Updated 6 ಜುಲೈ 2024, 13:18 IST
ಅಸ್ಸಾಂನ ಪ್ರವಾಹ ಪೀಡಿತ ಮೊರಿಗಾಂವ್‌ ಜಿಲ್ಲೆಯ ಬಲಿಮುಕ್‌ ಗ್ರಾಮದ ಜನರು ದೋಣಿ ಮೂಲಕ ಶನಿವಾರ ಸುರಕ್ಷಿತ ಪ್ರದೇಶದತ್ತ ಸಾಗಿದರು –ಪಿಟಿಐ ಚಿತ್ರ
ಅಸ್ಸಾಂನ ಪ್ರವಾಹ ಪೀಡಿತ ಮೊರಿಗಾಂವ್‌ ಜಿಲ್ಲೆಯ ಬಲಿಮುಕ್‌ ಗ್ರಾಮದ ಜನರು ದೋಣಿ ಮೂಲಕ ಶನಿವಾರ ಸುರಕ್ಷಿತ ಪ್ರದೇಶದತ್ತ ಸಾಗಿದರು –ಪಿಟಿಐ ಚಿತ್ರ   

ಗುವಾಹಟಿ: ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಶನಿವಾರವೂ ಗಂಭೀರವಾಗಿದ್ದು, 30 ಜಿಲ್ಲೆಗಳಲ್ಲಿ 24.50 ಲಕ್ಷಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ. ರಾಜ್ಯದ ಹಲವೆಡೆ ಪ್ರಮುಖ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ ಈ ವರ್ಷ ಪ್ರವಾಹ, ಭೂಕುಸಿತ, ಬಿರುಗಾಳಿಗಳಲ್ಲಿ ಮೃತಪಟ್ಟವರ ಸಂಖ್ಯೆ 64ಕ್ಕೆ ಏರಿಕೆಯಾಗಿದೆ.  ಈ ಪೈಕಿ ಪ್ರವಾಹದಿಂದ 52 ಮಂದಿ ಮೃತಪಟ್ಟಿದ್ದರೆ, ಭೂಕುಸಿತ ಮತ್ತು ಬಿರುಗಾಳಿಯಿಂದ 12 ಜನರು ಅಸುನೀಗಿದ್ದಾರೆ ಎಂದು ಅದು ವಿವರಿಸಿದೆ.

ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಶುಕ್ರವಾರ ದಿಬ್ರುಗಢ ಜಿಲ್ಲೆಯ ವಿವಿಧೆಡೆ ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸಿದರು. ಅಲ್ಲಿಂದ ಹಿಂದಿರುಗಿದ ಬಳಿಕ ತಡರಾತ್ರಿ ಅವರು ಅಧಿಕಾರಿಗಳ ಜತೆ ಪ್ರವಾಹ ಪರಿಸ್ಥಿತಿ ಕುರಿತು ಪರಿಶೀಲನಾ ಸಭೆ ನಡೆಸಿದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.