ADVERTISEMENT

Assam Flood | ಮುಂದುವರಿದ ಪ್ರವಾಹ ಪರಿಸ್ಥಿತಿ; 3 ಲಕ್ಷ ಜನರಿಗೆ ತೊಂದರೆ

ಪಿಟಿಐ
Published 20 ಜೂನ್ 2024, 4:55 IST
Last Updated 20 ಜೂನ್ 2024, 4:55 IST
<div class="paragraphs"><p>ಅಸ್ಸಾಂ ಪ್ರವಾಹ</p></div>

ಅಸ್ಸಾಂ ಪ್ರವಾಹ

   

(ಪಿಟಿಐ ಚಿತ್ರ)

ಗುವಾಹಟಿ: ಅಸ್ಸಾಂನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಪ್ರವಾಹದ ಸ್ಥಿತಿ ಮುಂದುವರಿದಿದೆ. 17 ಜಿಲ್ಲೆಗಳಲ್ಲಿ ಸುಮಾರು ಮೂರು ಲಕ್ಷ ಮಂದಿ ತೊಂದರೆಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎಎಸ್‌ಡಿಎಂಎ) ವರದಿಯ ಪ್ರಕಾರ, ಪ್ರವಾಹದ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಬಜಲಿ, ಬಕ್ಸಾ, ಬರ್‌ಪೇಟ, ಬಿಸ್ವನಾಥ್, ಕಾಚಾರ್ ದರಂಗ್, ಗೋವಲ್‌ಪಾರಾ, ಹೈಲಕಂಡಿ, ಹೊಜೈ, ಕರೀಂಗಂಜ್, ಲಖೀಂಪುರ, ನಾಗಾಂವ್, ನಲ್‌ಬಢಿ, ಸೋನಿತ್‌ಪುರ್, ದಕ್ಷಿಣ ಸಲ್ಮಾರ, ತಮುಲ್‌ಪುರ್ ಮತ್ತು ಉದಲ್‌ಗುಢಿ ಜಿಲ್ಲೆಗಳಲ್ಲಿ ಜನರು ತೊಂದರೆಗೆ ಸಿಲುಕಿದ್ದಾರೆ.

ಕರೀಂಗಂಜ್‌ನಲ್ಲಿ ಅತಿ ಹೆಚ್ಚು 2.5 ಲಕ್ಷ ಜನರು ತೊಂದರೆಗೆ ಸಿಲುಕಿದ್ದಾರೆ ಎಂದು ತಿಳಿಸಿದೆ. ಸಂಕಷ್ಟಕ್ಕೆ ಸಿಲುಕಿದ ಜನರಿಗಾಗಿ ವಿವಿಧ ಜಿಲ್ಲೆಗಳಲ್ಲಿ ಶಿಬಿರಗಳನ್ನು ತೆರೆಯಲಾಗಿದೆ. ಸಂತ್ರಸ್ತರಿಗೆ ಅಕ್ಕಿ ಸೇರಿದಂತೆ ಅಗತ್ಯ ವಸ್ತುಗಳನ್ನು ವಿತರಿಸಲಾಗುತ್ತಿದೆ.

ಈ ವರ್ಷ ಸಂಭವಿಸಿದ ಭೂಕುಸಿತ, ಬಿರುಗಾಳಿ ಹಾಗೂ ಪ್ರವಾಹ ಸೇರಿದಂತೆ ಮಳೆ ಸಂಬಂಧಿತ ಅವಘಡಗಳಲ್ಲಿ ಈವರೆಗೆ 35 ಮಂದಿ ಮೃತಪಟ್ಟಿದ್ದಾರೆ.

979 ಗ್ರಾಮಗಳು ಜಲಾವೃತಗೊಂಡಿದ್ದು, ರಾಜ್ಯದೆಲ್ಲೆಡೆ 3,326.31 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಎಎಸ್‌ಡಿಎಂಎ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.