ADVERTISEMENT

ಕರೀಂಗಂಜ್ ಮರುನಾಮಕರಣ: ಇನ್ನು ಮುಂದೆ ಶ್ರೀಭೂಮಿ

ಪಿಟಿಐ
Published 21 ನವೆಂಬರ್ 2024, 16:13 IST
Last Updated 21 ನವೆಂಬರ್ 2024, 16:13 IST
<div class="paragraphs"><p>ಕರೀಂಗಂಜ್</p></div>

ಕರೀಂಗಂಜ್

   

– ಎಕ್ಸ್ ಚಿತ್ರ

ಗುವಾಹಟಿ: ಅಸ್ಸಾಂನ ಕರೀಮ್‌ಗಂಜ್ ಜಿಲ್ಲೆಯ ಹೆಸರನ್ನು ಶ್ರೀಭೂಮಿ ಎಂದು ಮರುನಾಮಕರಣ ಮಾಡಿರುವ ಸರ್ಕಾರ ಈ ಕುರಿತು ಅಧಿಕೃತ ಅಧಿಸೂಚನೆಯನ್ನು ಗುರುವಾರ ಹೊರಡಿಸಿದೆ.

ADVERTISEMENT

ಜಿಲ್ಲಾ ಕೇಂದ್ರ ಕರೀಂಗಂಜ್ ಪಟ್ಟಣವನ್ನು ಶ್ರೀಭೂಮಿ ಪಟ್ಟಣ ಎಂದು ಮರುನಾಮಕರಣ ಮಾಡಲಾಗಿದ್ದು, ಈ ಬದಲಾವಣೆಯು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಅದು ಹೇಳಿದೆ.

‘ಅಸ್ಸಾಂನ ರಾಜ್ಯಪಾಲರು ಕರೀಂಗಂಜ್ ಜಿಲ್ಲೆಯನ್ನು ಶ್ರೀಭೂಮಿ ಜಿಲ್ಲೆ ಮತ್ತು ಕರೀಂಗಂಜ್ ಪಟ್ಟಣವನ್ನು ಶ್ರೀಭೂಮಿ ಪಟ್ಟಣ ಎಂದು ಮರುನಾಮಕರಣ ಮಾಡಿದ್ದಾರೆ’ ಎಂದು ಸಾಮಾನ್ಯ ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮುಖೇಶ್ ಚಂದ್ರ ಸಾಹು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

ಅಸ್ಸಾಂ ಸಂಪುಟವು ಕರೀಂಗಂಜ್ ಜಿಲ್ಲೆಯನ್ನು ಶ್ರೀಭೂಮಿ ಎಂದು ಮರುನಾಮಕರಣ ಮಾಡಲು ಮಂಗಳವಾರ ನಿರ್ಧರಿಸಿದೆ.

‘ಜಿಲ್ಲೆಯನ್ನು ಮರುನಾಮಕರಣ ಮಾಡುವ ನಿರ್ಧಾರವು ಜಿಲ್ಲೆಯ ಜನರ ನಿರೀಕ್ಷೆಗಳು ಮತ್ತು ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತದೆ’ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.