ಲೋಕಸಭಾ ಚುನಾವಣೆಗೆ ಮುಂಚಿನ ‘ಸೆಮಿಫೈನಲ್’ ಎಂದೇ ಪರಿಗಣಿಸಲಾಗಿರುವ ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಹಾಗೂ ಛತ್ತೀಸಗಢ ವಿಧಾನಸಭೆ ಚುನಾವಣೆಯ ಮತ ಎಣಿಕೆ ಇಂದು ನಡೆಯುತ್ತಿದೆ. ಈ ಫಲಿತಾಂಶವು ಬಿಜೆಪಿ ಹಾಗೂ ಅದರ ಪ್ರಮುಖ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಸಾಮರ್ಥ್ಯ ಹಾಗೂ ದೌರ್ಬಲ್ಯಗಳನ್ನೂ ಹೊರಹಾಕಲಿದೆ. ‘ಫೈನಲ್’ ಹಣಾಹಣಿಯ ರಣತಂತ್ರ ಗಳ ದಿಕ್ಕನ್ನು ಸಹ ಈ ಫಲಿತಾಂಶ ನಿರ್ಧರಿಸಲಿದೆ ಎಂದು ವ್ಯಾಖ್ಯಾನಿಸಲಾಗಿದೆ.
ನವೆಂಬರ್ 7ರಿಂದ 30ರ ಅವಧಿಯಲ್ಲಿ ಐದು ರಾಜ್ಯ ಗಳಿಗೆ ಚುನಾವಣೆ ನಡೆದಿತ್ತು. ಮಿಜೋರಾಂನಲ್ಲಿ ಮಾತ್ರ ಮತ ಎಣಿಕೆ ಸೋಮವಾರ ನಡೆಯಲಿದೆ.
ಯಾರ ವರ್ಚಸ್ಸು ಎಷ್ಟು?
ಈ ಫಲಿತಾಂಶವು ಕಮಲನಾಥ್, ಅಶೋಕ್ ಗೆಹಲೋತ್, ಭೂಪೇಶ್ ಬಘೆಲ್, ಎ. ರೇವಂತ್ ರೆಡ್ಡಿ (ಎಲ್ಲ ಕಾಂಗ್ರೆಸ್ ನಾಯಕರು), ಶಿವರಾಜ ಸಿಂಗ್ ಚೌಹಾಣ್, ನರೇಂದ್ರ ಸಿಂಗ್ ತೋಮರ್, ವಸುಂಧರಾ ರಾಜೇ ಸಿಂಧಿಯಾ, ರಮಣ್ ಸಿಂಗ್ (ಎಲ್ಲ ಬಿಜೆಪಿ ನಾಯಕರು) ಹಾಗೂ ಕೆ.ಚಂದ್ರಶೇಖರ್ ರಾವ್ (ಬಿಆರ್‌ಎಸ್) ಅವರ ವರ್ಚಸ್ಸು ಎಷ್ಟಿದೆ ಎಂಬುದನ್ನು ತೋರಿಸಿಕೊಡಲಿದೆ.
638 ಕ್ಷೇತ್ರ, 7,643 ಅಭ್ಯರ್ಥಿಗಳು
ನಾಲ್ಕು ರಾಜ್ಯಗಳ 638 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 7,643 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಅವರ ಭವಿಷ್ಯ ಭಾನುವಾರ ನಿರ್ಧಾರ ವಾಗಲಿದೆ. ಮತ ಎಣಿಕೆ ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದೆ.
ADVERTISEMENT
ಈ ರಾಜ್ಯಗಳು ಒಟ್ಟಾಗಿ 82 ಲೋಕಸಭಾ ಸ್ಥಾನಗಳನ್ನು ಹೊಂದಿವೆ. ಈ ಕ್ಷೇತ್ರಗಳ ಪೈಕಿ, 2019ರ ಚುನಾವಣೆಯಲ್ಲಿ ಬಿಜೆಪಿ 66 ಸ್ಥಾನಗಳನ್ನು ಮತ್ತು ಕಾಂಗ್ರೆಸ್ 6 ಸ್ಥಾನಗಳನ್ನು ಜಯಿಸಿದ್ದವು. ಉಳಿದ ಸ್ಥಾನಗಳು ಪ್ರಾದೇಶಿಕ ಪಕ್ಷಗಳ ಪಾಲಾಗಿದ್ದವು.
ಮತಗಟ್ಟೆ ಸಮೀಕ್ಷೆ ಏನು ಹೇಳುತ್ತಿದೆ?
ಐದು ರಾಜ್ಯಗಳ ಮತದಾನ ಪ್ರಕ್ರಿಯೆ ಮುಗಿದ ಬೆನ್ನಲ್ಲೇ, ವಿವಿಧ ವಿದ್ಯುನ್ಮಾನ ಮಾಧ್ಯಮಗಳು ನಡೆಸಿದ ಮತಗಟ್ಟೆ ಸಮೀಕ್ಷೆ ಪ್ರಕಟವಾಗಿದೆ. ತೆಲಂಗಾಣ ಹಾಗೂ ಛತ್ತೀಸಗಢ ರಾಜ್ಯಗಳ ಮತದಾರರು ಕಾಂಗ್ರೆಸ್ ಪಕ್ಷವನ್ನು ಗದ್ದುಗೆಯ ಸನಿಹಕ್ಕೆ ಕರೆದೊಯ್ಯುವ ಸಾಧ್ಯತೆ ಇದೆ ಎಂದು ಬಹುತೇಕ ಮತಗಟ್ಟೆ ಸಮೀಕ್ಷೆಗಳು ಹೇಳಿವೆ. ‘ಕೈ’ ಪಾಳಯದ ಪ್ರಬಲ ಸ್ಪರ್ಧೆಯ ನಡುವೆಯೂ ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಬಿಜೆಪಿಯು ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಸಮೀಕ್ಷೆಗಳು ‘ಭವಿಷ್ಯ’ ನುಡಿದಿವೆ.
ಮಧ್ಯಪ್ರದೇಶದಲ್ಲಿ ಪ್ರಸ್ತುತ ಬಿಜೆಪಿ ಅಧಿಕಾರದಲ್ಲಿದ್ದರೆ, ಕಾಂಗ್ರೆಸ್ ಪಕ್ಷವು ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಆಡಳಿತ ನಡೆಸುತ್ತಿದೆ. ತೆಲಂಗಾಣದಲ್ಲಿ ಬಿಆರ್‌ಎಸ್ 10 ವರ್ಷಗಳಿಂದ ಅಧಿಕಾರದಲ್ಲಿದೆ.
ಹೈದರಾಬಾದ್‌ಗೆ ಕರ್ನಾಟಕದ ನಾಯಕರು...
‘ತೆಲಂಗಾಣ ವಿಧಾನಸಭೆಗೆ ನಡೆದ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ರಾಜ್ಯದ ಕಾಂಗ್ರೆಸ್ ನಾಯಕರು ಹೈದರಾಬಾದ್‌ಗೆ ತೆರಳಿದ್ದಾರೆ. ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಲ್ಲದೆ, ಸಚಿವರಾದ ಎನ್.ಎಸ್. ಬೋಸರಾಜು, ಡಾ.ಎಂ.ಸಿ ಸುಧಾಕರ್, ಶಾಸಕರಾದ ಕೆ.ವೈ. ನಂಜೇಗೌಡ, ಪ್ರದೀಪ್ ಈಶ್ವರ್ ಈ ಹೈಕಮಾಂಡ್ ಸೂಚನೆ ನೀಡಿರುವ ಕಾರಣ ಈಗಾಗಲೇ ಹೈದರಾಬಾದ್‌ಗೆ ತೆರಳಿದ್ದಾರೆ.
ಕೆಲವೇ ಕ್ಷಣಗಳಲ್ಲಿ ಮತ ಎಣಿಕೆ ಆರಂಭ; ಬಿಗಿ ಭದ್ರತೆ
ದೆಹಲಿ ಕಾಂಗ್ರೆಸ್ ಕಚೇರಿಯಿಂದ ಕಂಡುಬಂದ ದೃಶ್ಯ
ಎಲ್ಲ ನಾಲ್ಕು ರಾಜ್ಯಗಳಲ್ಲಿ ಮತ ಎಣಿಕೆ ಆರಂಭ
ಅಂಚೆ ಮತಗಳ ಎಣಿಕೆ ಆರಂಭ
ಮಧ್ಯಪ್ರದೇಶ: 130ಕ್ಕೂ ಸ್ಥಾನಗಳಲ್ಲಿ ಗೆಲುವು ಖಚಿತ: ದಿಗ್ವಿಜಯ ಸಿಂಗ್ ಆತ್ಮವಿಶ್ವಾಸ
ಮಧ್ಯಪ್ರದೇಶದಲ್ಲಿ ಸ್ಟ್ರಾಂಗ್ ರೂಮ್ ತೆರೆದ ಕ್ಷಣ
ರಾಜಸ್ಥಾನದಲ್ಲಿ ಬಿಜೆಪಿಗೆ ಆರಂಭಿಕ ಮುನ್ನಡೆ
ಮತ ಎಣಿಕೆ ಆರಂಭಗೊಂಡಿದ್ದು, ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ನಿಕಟ ಪೈಪೋಟಿ ಕಂಡುಬಂದಿದೆ. ಆರಂಭಿಕ ಟ್ರೆಂಡ್ ಪ್ರಕಾರ ಮಧ್ಯಪ್ರದೇಶದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ತಲಾ 11 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ರಾಜಸ್ಥಾನದಲ್ಲಿ ಕಾಂಗ್ರೆಸ್ 18 ಹಾಗೂ ಬಿಜೆಪಿ 16 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿವೆ.
ತೆಲಂಗಾಣದಲ್ಲಿ ಮತ ಎಣಿಕೆ ಬಿರುಸಿನಿಂದ ಸಾಗುತ್ತಿದೆ.
ತೆಲಂಗಾಣ ಜನತೆಯ ಆಶೀರ್ವಾದ ನಮ್ಮೊಂದಿಗೆ ಇದ್ದು, ಮತ್ತೆ ಬಹುಮತ ಪಡೆದು ಸರ್ಕಾರ ರಚಿಸಲಿದ್ದೇವೆ: ಬಿಆರ್‌ಎಸ್ ನಾಯಕಿ ಕವಿತಾ
ಎಲ್ಲ ನಾಲ್ಕು ರಾಜ್ಯಗಳ ಆರಂಭಿಕ ಟ್ರೆಂಡ್
ಟ್ರೆಂಡ್ ಏನೆಂಬುದನ್ನು ಗಮನಿಸಿಲ್ಲ, ಮಧ್ಯಪ್ರದೇಶದ ಜನರ ಮೇಲೆ ನಂಬಿಕೆಯಿದೆ: ಕಮಲ್‌ನಾಥ್
ರಾಜಸ್ಥಾನದಲ್ಲಿ ಕಾಂಗ್ರೆಸ್ 43 ಹಾಗೂ ಬಿಜೆಪಿ 35ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ. ಮಧ್ಯಪ್ರದೇಶದಲ್ಲಿ ನಿಕಟ ಪೈಪೋಟಿ ಕಂಡುಬಂದಿದೆ.
ಮಧ್ಯಪ್ರದೇಶ:
ಮಧ್ಯಪ್ರದೇಶದಲ್ಲಿ ಬಿಜೆಪಿ 43 ಹಾಗೂ ಕಾಂಗ್ರೆಸ್ 42 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ತೆಲಂಗಾಣ, ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಮುನ್ನಡೆ
ಮತ ಎಣಿಕೆ ಆರಂಭಿಕ ಟ್ರೆಂಡ್‌ನಲ್ಲಿ ತೆಲಂಗಾಣ, ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ. ಛತ್ತೀಸ್‌ಗಢದಲ್ಲಿ 42ರಲ್ಲಿ ಕಾಂಗ್ರೆಸ್, 32 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡಿದ್ದಾರೆ. ತೆಲಂಗಾಣದಲ್ಲಿ 59ರಲ್ಲಿ ಕಾಂಗ್ರೆಸ್, 25ರಲ್ಲಿ ಬಿಆರ್‌ಎಸ್ ಮುನ್ನಡೆ ಪಡೆದಿದೆ.
ಚುನಾವಣಾ ಆಯೋಗದ ಪ್ರಕಾರ ಆರಂಭಿಕ ಟ್ರೆಂಡ್
ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಬಿಜೆಪಿಗೆ ಮುನ್ನಡೆ
ಈಗಿನ ಟ್ರೆಂಡ್ ಪ್ರಕಾರ, ಮಧ್ಯಪ್ರದೇಶದಲ್ಲಿ ಬಿಜೆಪಿ 97 ಮತ್ತು ಕಾಂಗ್ರೆಸ್ 81 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಹಾಗೆಯೇ ರಾಜಸ್ಥಾನದಲ್ಲಿ 94ರಲ್ಲಿ ಬಿಜೆಪಿ ಮತ್ತು 79ರಲ್ಲಿ ಕಾಂಗ್ರೆಸ್ ಮುನ್ನಡೆ ಗಳಿಸಿದೆ.
ತೆಂಲಗಾಣದಲ್ಲಿ 58 ಸ್ಥಾನಗಳಲ್ಲಿ ಕಾಂಗ್ರೆಸ್ ಮುನ್ನಡೆ
ಆರಂಭಿಕ ಟ್ರೆಂಡ್ ಪ್ರಕಾರ 119 ಸದಸ್ಯ ಬಲದ ತೆಲಂಗಾಣದಲ್ಲಿ ಕಾಂಗ್ರೆಸ್ 58ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಮುನ್ನಡೆ
ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ 45 ಹಾಗೂ ಬಿಜೆಪಿ 32 ಸ್ಥಾನಗಳಲ್ಲಿ ಮುನ್ನಡೆ ಗಳಿಸಿದೆ. ಛತ್ತೀಸ್‌ಗಢದಲ್ಲಿ ಒಟ್ಟು ಕ್ಷೇತ್ರಗಳು 90.
ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಬಿಜೆಪಿ 100ಕ್ಕೂ ಅಧಿಕ ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಮಧ್ಯಪ್ರದೇಶದಲ್ಲಿ 109 ಮತ್ತು ರಾಜಸ್ಥಾನದಲ್ಲಿ 104 ಸ್ಥಾನಗಳಲ್ಲಿ ಮುನ್ನಡೆ ಗಳಿಸಿದೆ.
ಚುನಾವಣಾ ಆಯೋಗದ ಆರಂಭಿಕ ಟ್ರೆಂಡ್ ಪ್ರಕಾರ,ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಬಿಜೆಪಿ ಮುನ್ನಡೆಯನ್ನು ಕಾಯ್ದುಕೊಂಡಿದೆ.
ಚುನಾವಣಾ ಆಯೋಗದ ಪ್ರಕಾರ ರಾಜಸ್ಥಾನದ ಲೇಟೆಸ್ಟ್ ಟ್ರೆಂಡ್
ಚುನಾವಣಾ ಆಯೋಗದ ಪ್ರಕಾರ ಮಧ್ಯಪ್ರದೇಶದ ಲೇಟೆಸ್ಟ್ ಟ್ರೆಂಡ್
ಚುನಾವಣಾ ಆಯೋಗದ ಪ್ರಕಾರ ತೆಲಂಗಾಣದ ಲೇಟೆಸ್ಟ್ ಟ್ರೆಂಡ್
ಚುನಾವಣಾ ಆಯೋಗದ ಪ್ರಕಾರ ಛತ್ತೀಸ್‌ಗಢದ ಲೇಟೆಸ್ಟ್ ಟ್ರೆಂಡ್
ರಾಜಸ್ಥಾನ: ವಸುಂಧರಾ ರಾಜೇ 10 ಸಾವಿರಕ್ಕೂ ಹೆಚ್ಚು ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಚುನಾವಣಾ ಆಯೋಗದ ತಾಜಾ ಟ್ರೆಂಡ್ ಪ್ರಕಾರ ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಬಿಜೆಪಿ 100ಕ್ಕೂ ಅಧಿಕ ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹಲೋತ್ 5,759 ಮತಗಳ ಅಂತರದ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಮಧ್ಯಪ್ರದೇಶ: ಭೋಪಾಲದಲ್ಲಿ ಬಿಜೆಪಿ ನಾಯಕರು, ಕಾರ್ಯಕರ್ತರಿಂದ ಸಿಹಿ ತಿಂಡಿ ಹಂಚಿ ಸಂಭ್ರಮಾಚರಣೆ
ತೆಲಂಗಾಣ ರಾಜ್ಯ ಘಟಕದ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್‌ಗೆ ಹಿನ್ನಡೆ
ಡಿಸೆಂಬರ್ 6ರಂದು ಇಂಡಿಯಾ ಮೈತ್ರಿಕೂಟದ ಮುಂದಿನ ಸಭೆ ಕರೆದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ. ಮೈತ್ರಿ ಪಕ್ಷಗಳಿಗೆ ದೆಹಲಿಯಲ್ಲಿ ನಡೆಯಲಿರುವ ಸಭೆಯಲ್ಲಿ ಭಾಗಿಯಾಗುವಂತೆ ಕರೆ.
ರಾಜಸ್ಥಾನದಲ್ಲಿ 'ಮ್ಯಾಜಿಕ್' ಅಂತ್ಯಗೊಂಡಿದೆ. ಜನರು ಬಡವರು ಹಾಗೂ ಮಹಿಳೆಯರ ಪರ ಮತ ಹಾಕಿದ್ದಾರೆ ಎಂದು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದ್ದಾರೆ.
ತೆಲಂಗಾಣ: ಕಾಂಗ್ರೆಸ್ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮ
ಚುನಾವಣಾ ಆಯೋಗದ ಪ್ರಕಾರ ತಾಜಾ ಟ್ರೆಂಡ್
ರಾಜಸ್ಥಾನ: ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮ
ರಾಜಸ್ಥಾನ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸತೀಶ್ ಪೂನಿಯಾಗೆ ಹಿನ್ನಡೆ. ಮತ್ತೊಂದೆಡೆ ಬಿಜೆಯ ಕಿರೋಡಿ ಲಾಲ್ ಮೀನಾ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಛತ್ತೀಸ್‌ಗಢದಲ್ಲಿ ನಿಕಟ ಸ್ಪರ್ಧೆ
ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿದೆ. ಚುನಾವಣಾ ಆಯೋಗದ ತಾಜಾ ಟ್ರೆಂಡ್ ಪ್ರಕಾರ, ಬಿಜೆಪಿ 43 ಹಾಗೂ ಕಾಂಗ್ರೆಸ್ 39 ಮತ್ತು ಸಿಪಿಐ ಒಂದು ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಮ್ಯಾಜಿಕ್ ಸಂಖ್ಯೆ 46 ಆಗಿದೆ.
ರಾಜಸ್ಥಾನ: ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಗುಜರಾತ್‌ನಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮ
ಚುನಾವಣಾ ಫಲಿತಾಂಶ ಲೈವ್ ಈಗಿನ ಟ್ರೆಂಡ್: ರಾಜಸ್ಥಾನ ಮರಳಿ ಬಿಜೆಪಿಯತ್ತ, ತೆಲಂಗಾಣದಲ್ಲಿ ಕಾಂಗ್ರೆಸ್ ಹಿಡಿತ, ಮಧ್ಯಪ್ರದೇಶ ಬಿಜೆಪಿ, ಛತ್ತೀಸಗಢ ಪ್ರಬಲ ಪೈಪೋಟಿ
ತೆಲಂಗಾಣ: ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಪೋಸ್ಟರ್‌ಗಳಿಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಹಾಲಿನ ಅಭಿಷೇಕ
ತೆಲಂಗಾಣದಲ್ಲಿ ಸರ್ಕಾರ ರಚನೆಗೆ ಕಾಂಗ್ರೆಸ್ ಸಿದ್ಧತೆ ಆರಂಭ
ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಲಿದೆ. ಇಲ್ಲಿನ ಜನರ ಹೃದಯದಲ್ಲಿ ಗಾಂಧಿ ಕುಟುಂಬಕ್ಕೆ ವಿಶೇಷ ಸ್ಥಾನವಿದೆ. 2014 ಹಾಗೂ 2018ರಲ್ಲಿ ತಪ್ಪು ಮಾಡಿದೆವು. ಆದರೆ ಆ ತಮ್ಮನ್ನು ಈ ಬಾರಿ ತಿದ್ದಿದ್ದೇವೆ ಎಂದು ಕಾಂಗ್ರೆಸ್ ಸಂಸದ ಉತ್ತಮ್ ಕುಮಾರ್ ರೆಡ್ಡಿ ಹೇಳಿದ್ದಾರೆ.
ಮಧ್ಯಪ್ರದೇಶ: ಮತ ಎಣಿಕೆ ಪ್ರಗತಿಯಲ್ಲಿ...
ಮಧ್ಯಪ್ರದೇಶದ 52 ಜಿಲ್ಲಾ ಕೇಂದ್ರಗಳಲ್ಲಿ ಮತ ಎಣಿಕೆ ಸುಗಮವಾಗಿ ಸಾಗುತ್ತಿದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
ಪ್ರಧಾನಿ ಮೋದಿಗೆ ಶ್ರೇಯ ಸಲ್ಲಿಸಿದ ಮಧ್ಯಪ್ರದೇಶ ಸಿಎಂ
ಮಧ್ಯಪ್ರದೇಶದಲ್ಲಿ ಬಿಜೆಪಿ ಸ್ಪಷ್ಟ ಬಹುಮತದತ್ತ ಮುನ್ನಡೆದಿದೆ. ಈ ನಡುವೆ ಚುನಾವಣೆಯಲ್ಲಿ ಪಕ್ಷದ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಶ್ರೇಯ ಸಲ್ಲಿಸಿದ್ದಾರೆ. ಡಬಲ್ ಎಂಜಿನ್ ಸರ್ಕಾರದ ಯೋಜನೆಗಳನ್ನುಸಮರ್ಥವಾಗಿ ಜಾರಿಗೆ ತಂದಿರುವುದಾಗಿ ಅವರು ಹೇಳಿದರು.
ಪ್ರಬಲ ಪೈಪೋಟಿ ಕಂಡುಬಂದಿರುವ ಛತ್ತೀಸ್‌ಗಢದಲ್ಲಿ ಬಿಜೆಪಿ ಮೇಲುಗೈ ಸಾಧಿಸುತ್ತಿರುವುದು ಚುನಾವಣಾ ಟ್ರೆಂಡ್‌ನಿಂದ ತಿಳಿದು ಬಂದಿದೆ. ಬಿಜೆಪಿ 51 ಹಾಗೂ ಕಾಂಗ್ರೆಸ್ 37 ಸ್ಥಾನಗಳಲ್ಲಿ ಮುನ್ನಡೆ ಗಳಿಸಿದೆ.
ಛತ್ತೀಶ್‌ಗಢ, ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಸ್ಪಷ್ಟ ಬಹುಮತದತ್ತ ಬಿಜೆಪಿ. ತೆಲಂಗಾಣದಲ್ಲಿ ಕಾಂಗ್ರೆಸ್ ಮೇಲುಗೈ.
ಛತ್ತೀಸ್‌ಗಢ: ಮಾಜಿ ಸಿಎಂ, ಬಿಜೆಪಿ ನಾಯಕ ರಮನ್ ಸಿಂಗ್ ಅವರು ಮುನ್ನಡೆ ಕಾಯ್ದುಕೊಂಡಿದ್ದಾರೆ.
ಸಂಸತ್ ಕಲಾಪಕ್ಕೆ ವಿಪಕ್ಷಗಳು ಅಡ್ಡಿಪಡಿಸಿದರೆ ಇಂದು ಬಂದಿರುವುದಕ್ಕಿಂತಲೂ ಕೆಟ್ಟ ಫಲಿತಾಂಶವನ್ನುಎದುರಿಸಬೇಕಾಗುತ್ತದೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ
ರಾಜಸ್ಥಾನದಲ್ಲಿ ಶೀಘ್ರದಲ್ಲೇ ನೂತನ ಮುಖ್ಯಮಂತ್ರಿ ಆಯ್ಕೆ: ಪ್ರಲ್ಹಾದ ಜೋಶಿ
ದೇಶದಲ್ಲಿ ಒಂದೇ ಗ್ಯಾರಂಟಿ - ಮೋದಿಜೀಯ ಗ್ಯಾರಂಟಿ :ಪ್ರಲ್ಹಾದ ಜೋಶಿ
ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಮತ್ತೆ ಅಧಿಕಾರ ಬಹುತೇಕ ಖಚಿತ
ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ: ಆಕರ್ಷಕ ಚಿತ್ರಗಳು ಇಲ್ಲಿವೆ
ಮಧ್ಯಪ್ರದೇಶ: ಒಂಬತ್ತನೇ ಸುತ್ತಿನ ಮತ ಎಣಿಕೆ ವೇಳೆಗೆ ಕಾಂಗ್ರೆಸ್ ನಾಯಕ ಕಮಲ್‌ನಾಥ್ 15,623 ಮತಗಳ ಅಂತರದ ಮುನ್ನಡೆ ಕಾಯ್ದುಕೊಂಡಿದ್ದಾರೆ.
ರಾಜ್ಯದಲ್ಲಿ ಬದಲಾವಣೆ, ಪ್ರಗತಿ, ಅಭಿವೃದ್ಧಿ ಬೇಕು ಎಂದು ತೆಲಂಗಾಣದ ಜನರು ಬಯಸಿದ್ದಾರೆ. ನಾನು ಕೆಸಿಆರ್ ಅಥವಾ ಕೆಟಿಆರ್ ಬಗ್ಗೆ ಮಾತನಾಡಲು ಬಯಸುವುದಿಲ್ಲ. ಅವರಿಗೆ ತೆಲಂಗಾಣದ ಜನತೆ ತಕ್ಕ ಉತ್ತರ ನೀಡಿದ್ದಾರೆ. ರೇವಂತ್ ರೆಡ್ಡಿ ನಮ್ಮ ಪಿಸಿಸಿ ಅಧ್ಯಕ್ಷರು. ಅವರೆಲ್ಲರ ನಾಯಕತ್ವದಲ್ಲಿ ಚುನಾವಣೆ ಎದುರಿಸಿದ್ದೇವೆ ಎಂದು ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಹೈದರಾಬಾದ್‌ನಲ್ಲಿ ಕಾಂಗ್ರೆಸ್ ನಾಯಕ ರೇವಂತ್ ರೆಡ್ಡಿ ರೋಡ್ ಶೋ, ಕಾರ್ಯಕರ್ತರ ವಿಜಯೋತ್ಸವ
ಪ್ರಧಾನಿ ನರೇಂದ್ರ ಮೋದಿ ಅವರ ಕೆಲಸ ಹಾಗೂ ಗ್ಯಾರಂಟಿಗಳ ಮೇಲೆ ಛತ್ತೀಸ್‌ಗಢದ ಜನರು ನಂಬಿಕೆ ಇರಿಸಿದ್ದಾರೆ. ಸಿಎಂ ಭೂಪೇಶ್ ಬಘೇಲ್ ಅವರ ಗ್ಯಾರಂಟಿಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ ಎಂದು ಮಾಜಿ ಸಿಎಂ ರಮಣ್ ಸಿಂಗ್ ಹೇಳಿದ್ದಾರೆ.
ಮಧ್ಯ ಪ್ರದೇಶ: ಪ್ರಮುಖರಿಗೆ ಹಿನ್ನಡೆ
ಎರಡನೇ ಹಂತದ ಮತ ಎಣಿಕೆ ವೇಳೆಗೆ ನರೋತ್ತಮ್ ಮಿಶ್ರಾ, 2,243 ಮತಗಳ ಹಿನ್ನಡೆಯಲ್ಲಿದ್ದಾರೆ. ಮೋಹನ್ ಯಾದವ್ ವಿಶ್ವಾಸ್ ಸಾರಂಗ್, ಮಹೇಂದ್ರ ಸಿಂಗ್ ಸಿಸೋಡಿಯಾ ಸಹ ಹಿನ್ನಡೆ ಅನುಭವಿಸಿದ್ದಾರೆ.
ಮಧ್ಯಾಹ್ನ 1 ಗಂಟೆ ವೇಳೆಗೆ ಟ್ರೆಂಡ್
ರಾಜಸ್ಥಾನ:
ಬಿಜೆಪಿ: 111
ಕಾಂಗ್ರೆಸ್: 73
ಮಧ್ಯ ಪ್ರದೇಶ:
ಬಿಜೆಪಿ: 162
ಕಾಂಗ್ರೆಸ್: 65
ಛತ್ತೀಸ್‌ಗಢ:
ಬಿಜೆಪಿ: 53
ಕಾಂಗ್ರೆಸ್: 35
ತೆಲಂಗಾಣ:
ಕಾಂಗ್ರೆಸ್: 62
ಬಿಆರ್‌ಎಸ್: 43
ಬಿಜೆಪಿ: 9
ಮಧ್ಯಪ್ರದೇಶದ ಯಶಸ್ಸನ್ನು ಪ್ರಧಾನಿ ಮೋದಿಗೆ ಅರ್ಪಿಸಿದ ಸಿಎಂ ಚೌಹಾಣ್
Rajasthan Results 2023: BJP-Congress ನಡುವೆ 25 ವರ್ಷಗಳಿಂದ ಅಧಿಕಾರ ಬದಲಾವಣೆ
ಪ್ರಧಾನಿ ಮೋದಿ ಅವರನ್ನು ಜನರು ಬೆಂಬಲಿಸಿದ್ದಾರೆ ಎಂಬುದು ಚುನಾವಣಾ ಫಲಿತಾಂಶದಿಂದ ಸ್ಪಷ್ಟವಾಗಿದೆ: ಕರ್ನಾಟಕದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
ದೇಶದ ಜರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಇದ್ದ ನಂಬಿಕೆಗೆ ಸಿಕ್ಕ ದೊಡ್ಡ ಗೆಲುವು ಇದಾಗಿದೆ: ಕೇಂದ್ರ ಸಚಿವ ಪಿಯೂಷ್ ಗೋಯಲ್
ದೆಹಲಿಯ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರ ವಿಜಯೋತ್ಸವ
ಅಭಿವೃದ್ಧಿಯೇ ಪ್ರಧಾನಿ ಮೋದಿ ಅವರ ಗ್ಯಾರಂಟಿ. ಜನರು ಅವರ ಮೇಲೆ ನಂಬಿಕೆ ಇಟ್ಟಿದ್ದಾರೆ: ಕೇಂದ್ರ ಸಚಿವೆ ಸ್ಮೃತಿ ಇರಾನಿ
ಮೂರು ರಾಜ್ಯಗಳಲ್ಲಿ ಬಿಜೆಪಿ, ತೆಲಂಗಾಣದಲ್ಲಿ ಕಾಂಗ್ರೆಸ್
4 ರಾಜ್ಯಗಳ ವಿಧಾನಸಭೆ ಚುನಾವಣೆಗಳ ಮತ ಎಣಿಕೆ ನಡೆಯುತ್ತಿದ್ದು, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಢ ರಾಜ್ಯಗಳಲ್ಲಿ ಬಿಜೆಪಿ ಮುನ್ನಡೆ ಪಡೆದಿದ್ದು, ತೆಲಂಗಾಣದಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಮತಗಟ್ಟೆ ಸಮೀಕ್ಷೆಗಳು ನಿಜವಾಗಿದ್ದು, ಛತ್ತೀಸಗಢದಲ್ಲಿ ವ್ಯತಿರಿಕ್ತವಾಗಿದೆ.
ರಾಜಸ್ಥಾನ ಹಾಗೂ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುವುದು ಖಚಿತವೆನಿಸಿದೆ. ಆದರೆ ತೆಲಂಗಾಣದಲ್ಲಿ ಅಧಿಕಾರಕ್ಕೆ ಬರುವುದು ನಿಚ್ಚಳವೆನಿಸಿದೆ. ಮತ್ತೊಂದೆಡೆ ಮಧ್ಯಪ್ರದೇಶದಲ್ಲಿ ಮತ್ತೆ ಅಧಿಕಾರಕ್ಕೆ ಮರಳುತ್ತಿರುವ ಬಿಜೆಪಿ, ರಾಜಸ್ಥಾನ ಮತ್ತು ಛತ್ತೀಸಗಢ ರಾಜ್ಯಗಳನ್ನೂ ಕೈವಶ ಮಾಡಿಕೊಳ್ಳುವತ್ತ ಅಡಿ ಇಟ್ಟಿದೆ.