ನವದೆಹಲಿ: ನಾಲ್ಕು ರಾಜ್ಯಗಳ ವಿಧಾನಸಭೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಢದಲ್ಲಿ ಬಿಜೆಪಿಗೆ ಭಾರಿ ಗೆಲುವು ದಕ್ಕಿದೆ. ಆಡಳಿತ ವಿರೋಧಿ ಅಲೆಯನ್ನು ಅನುಕೂಲಕರವಾಗಿ ಪರಿವರ್ತಿಸಿಕೊಂಡ ಕಾಂಗ್ರೆಸ್ ತೆಲಂಗಾಣದಲ್ಲಿ ಗೆದ್ದಿದೆ.
ಮಧ್ಯಪ್ರದೇಶದ 230 ಸ್ಥಾನಗಳ ಪೈಕಿ 163 ಸ್ಥಾನಗಳನ್ನು, ರಾಜಸ್ಥಾನದ 199 ಸ್ಥಾನಗಳಲ್ಲಿ 115 ಸ್ಥಾನಗಳನ್ನು ಹಾಗೂ ಛತ್ತೀಸ್‌ಗಢದ 90 ಸ್ಥಾನಗಳಲ್ಲಿ 54 ಸ್ಥಾನಗಳನ್ನು ಜಯಿಸುವ ಮೂಲಕ ಬಿಜೆಪಿ ಗೆಲುವಿನ ನಗೆ ಬೀರಿದೆ. ತೆಲಂಗಾಣದ 119 ಸ್ಥಾನಗಳಲ್ಲಿ 64 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಸಮಾಧಾನ ಪಟ್ಟಿದೆ.
ಪ್ರತಿ ಐದು ವರ್ಷಕ್ಕೊಮ್ಮೆ ಸರ್ಕಾರವನ್ನು ಬದಲಿಸುವ ಪರಂಪರೆಯನ್ನು ರಾಜಸ್ಥಾನ ಮುಂದುವರಿಸಿದೆ. 2018ರಲ್ಲಿ ಅಧಿಕಾರ ಕಳೆದುಕೊಂಡಿದ್ದ ಬಿಜೆಪಿ ಈ ಬಾರಿ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಏರಿದೆ.
ಮತ ಪ್ರಮಾಣ
ಬಿಜೆಪಿ – ಶೇ. 41.69
ಕಾಂಗ್ರೆಸ್ – ಶೇ. 39.53
ಇತರೆ – ಶೇ. 12.69
ಆರ್‌ಎಲ್‌ಟಿಪಿ ಶೇ.2.39
ಬಿಎಸ್‌ಪಿ – ಶೇ. 1.82
ನೋಟಾ – ಶೇ.0.96
ಸಿಪಿಎಂ – ಶೇ.0.96
ಕಾಂಗ್ರೆಸ್ – ಶೇ. 40.40
ಇತರೆ – ಶೇ. 6.66
ಬಿಎಸ್‌ಪಿ – ಶೇ.3.40
ನೋಟಾ – ಶೇ. 0.98
ಬಿಜೆಪಿ– ಶೇ.46.29
ಕಾಂಗ್ರೆಸ್ – ಶೇ. 42.23
ಇತರೆ – ಶೇ. 8.17
ಬಿಎಸ್‌ಪಿ– ಶೇ.2.05
ನೋಟಾ – ಶೇ. 1.26
ಕಾಂಗ್ರೆಸ್ – ಶೇ.39.40
ಬಿಆರ್‌ಎಸ್– ಶೇ.37.35
ಬಿಜೆಪಿ– ಶೇ.13.89
ಇತರೆ – ಶೇ. 6.41
ಎಐಎಂಐಎಂ– ಶೇ.2.21
ನೋಟಾ – ಶೇ. 0.73
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.