ADVERTISEMENT

Election Result 2023 Quick Guide: ಫಲಿತಾಂಶ ಪೂರ್ಣ ಚಿತ್ರಣ ಇಲ್ಲಿದೆ

ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಢಗಳಲ್ಲಿ ಬಿಜೆಪಿ ವಿಜಯಿಯಾಗಿದ್ದರೆ, ತೆಲಂಗಾಣದಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದೆ. ಮಿಜೋರಾಂನಲ್ಲಿ ಜೆಡ್‌ಪಿಎಂ ಕೈಗೆ ಆಡಳಿತ ಸಿಕ್ಕಿದೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಡಿಸೆಂಬರ್ 2023, 12:54 IST
Last Updated 4 ಡಿಸೆಂಬರ್ 2023, 12:54 IST
<div class="paragraphs"><p>ಬಿಜೆಪಿ ಕಚೇರಿಯಲ್ಲಿ ಪ್ರಧಾನಿ ಮೋದಿ ಅವರಿಗೆ ಅಭಿನಂದಿಸಲಾಯಿತು</p></div>

ಬಿಜೆಪಿ ಕಚೇರಿಯಲ್ಲಿ ಪ್ರಧಾನಿ ಮೋದಿ ಅವರಿಗೆ ಅಭಿನಂದಿಸಲಾಯಿತು

   

ಪಿಟಿಐ

ಬೆಂಗಳೂರು: 2024 ಲೋಕಸಭೆ ಚುನಾವಣೆಗಳ ಸೆಮಿಫೈನಲ್ ಎಂದೇ ಪರಿಗಣಿತವಾಗಿರುವ ಐದೂ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಮೂರು ರಾಜ್ಯಗಳಲ್ಲಿ ಬಿಜೆಪಿ ಗರಿಷ್ಠ ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೇರಿದ್ದರೆ, ಕಾಂಗ್ರೆಸ್ ಪಕ್ಷವು ಒಂದು ರಾಜ್ಯದಲ್ಲಿ ಪ್ರಾಬಲ್ಯ ಸಾಧಿಸಿದೆ. ಇಂದು (ಸೋಮವಾರ) ಪ್ರಕಟವಾದ ಫಲಿತಾಂಶದಂತೆ ಮಿಜೋರಾಂನಲ್ಲಿ ಝೋರಂ ಪೀಪಲ್ಸ್ ಮೂವ್‌ಮೆಂಟ್ (ಜೆಡ್‌ಪಿಎಂ) ವಿಜಯಿಯಾಗಿದೆ.

ADVERTISEMENT

ಈ ಬಾರಿಯ ಫಲಿತಾಂಶದ ವಿಶೇಷವೆಂದರೆ, ಯಾವುದೇ ಪಕ್ಷಾಂತರ, ಆಮಿಷ ಅಥವಾ ಆಪರೇಶನ್ - ಇಲ್ಲದೆಯೇ ಪಕ್ಷಗಳು ಸರಕಾರ ರಚಿಸುವಷ್ಟು ಬಹುಮತವನ್ನು ಪಡೆದುಕೊಂಡಿರುವುದು.

ಮಿಜೋರಾಂ ಚುನಾವಣಾ ಫಲಿತಾಂಶ 2023
ಒಟ್ಟು 40 ಕ್ಷೇತ್ರಗಳ ಪೈಕಿ, ZPM 27, ಹಾಲಿ ಆಡಳಿತಾರೂಢ ಎಂಎನ್ಎಫ್ 10, ಬಿಜೆಪಿ 2 ಹಾಗೂ ಕಾಂಗ್ರೆಸ್ 1 ಕ್ಷೇತ್ರದಲ್ಲಿ ವಿಜಯಿಯಾಗಿದೆ. ಇಲ್ಲಿ ಸರಕಾರ ರಚನೆಗೆ ಬೇಕಿರುವುದು 21 ಸ್ಥಾನ. ತಾಜಾ ಮುಖ್ಯಾಂಶಗಳು ಇಲ್ಲಿವೆ
90 ಕ್ಷೇತ್ರಗಳ ಪೈಕಿ ಬಿಜೆಪಿ 54, ಕಾಂಗ್ರೆಸ್ 35 ಹಾಗೂ ಜಿಜಿಪಿ 1 ಕ್ಷೇತ್ರಗಳನ್ನು ಗೆದ್ದುಕೊಂಡಿವೆ. ಇಲ್ಲಿ ಸರಕಾರ ರಚನೆಗೆ ಬೇಕಿರುವ ಸ್ಥಾನಗಳ ಸಂಖ್ಯೆ 46. ಮುಖ್ಯಾಂಶಗಳು ಇಲ್ಲಿವೆ.
230 ಕ್ಷೇತ್ರಗಳ ಪೈಕಿ ಬಿಜೆಪಿ 163, ಕಾಂಗ್ರೆಸ್ 66, ಇತರರು 1 ಕ್ಷೇತ್ರಗಳಲ್ಲಿ ಪಾರಮ್ಯ ಸಾಧಿಸಿದ್ದು, ಇಲ್ಲಿ ಸರಕಾರ ರಚನೆಗೆ ಬೇಕಿರುವ ಸ್ಥಾನಗಳು 116. ಮುಖ್ಯಾಂಶಗಳು ಇಲ್ಲಿವೆ.
199 ಕ್ಷೇತ್ರಗಳ ಪೈಕಿ ಬಿಜೆಪಿ 115ರಲ್ಲಿ, ಕಾಂಗ್ರೆಸ್ 69, ಸ್ವತಂತ್ರರು 8, ಇತರರು 5 ಕ್ಷೇತ್ರಗಳಲ್ಲಿ ಜಯಶಾಲಿಯಾಗಿದೆ. ಸರಕಾರ ರಚನೆಗೆ ಬೇಕಿರುವ ಮ್ಯಾಜಿಕ್ ಸಂಖ್ಯೆ 101. ಒಂದು ಕ್ಷೇತ್ರದಲ್ಲಿ ಮತದಾನ ನಡೆಯಬೇಕಷ್ಟೇ. ಮುಖ್ಯಾಂಶಗಳು ಇಲ್ಲಿವೆ.
119 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 64 ಕ್ಷೇತ್ರಗಳಲ್ಲಿ, ಬಿಆರ್‌ಎಸ್ 39, ಬಿಜೆಪಿ 8, ಎಐಎಂಐಎಂ 7, ಸಿಪಿಐ 1 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದೆ. ಇಲ್ಲಿ ಸರಕಾರ ರಚಿಸಲು ಬೇಕಿರುವ ಸ್ಥಾನಗಳ ಸಂಖ್ಯೆ 60. ಮುಖ್ಯಾಂಶಗಳು ಇಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.