ರಾಜ್ಯದಲ್ಲಿ ಮತ ಜಿಹಾದ್ ಆರಂಭಗೊಂಡಿದೆ. ಇದನ್ನು ಲೋಕಸಭಾ ಚುನಾವಣೆಯಲ್ಲಿಯೇ ನೋಡಿದೆವು. ಡುಲೆ ವಿಭಾಗದಲ್ಲಿ ನಾವು 1.90 ಲಕ್ಷ ಮತಗಳಿಂದ ಮುನ್ನಡೆ ಸಾಧಿಸಿದ್ದೆವು. ಮಾಲೆಗಾಂವ್ ವಿಭಾಗದ ಮತ ಎಣೆಕೆ ಆರಂಭವಾಗುತ್ತಿದ್ದಂತೆಯೇ 4 ಸಾವಿರ ಮತಗಳಿಂದ ನಾವು ಹಿನ್ನಡೆ ಅನುಭವಿಸಿದೆವು. ಮತ ಜಿಹಾದ್ ಕಾರಣಕ್ಕೆ ನಾವು ಸೋತೆವು ಮತ್ತು ನಾವುಗಳು ಒಗ್ಗಟ್ಟಿನಿಂದಲೂ ಇರಲಿಲ್ಲ. ಮತ ಜಿಹಾದ್ ವಿರುದ್ಧವಾಗಿ ‘ಧರ್ಮ ಯುದ್ಧ’ ಮಾಡಲು ಸಿದ್ಧರಾಗಿದೇವೇಂದ್ರ ಫಡಣವೀಸ್, ಮಹಾರಾಷ್ಟ್ರ ಉಪಮುಖ್ಯಮಂತ್ರಿ
ನಮ್ಮ ಪೂರ್ವಜರು ಬ್ರಿಟಿಷರ ವಿರುದ್ಧ ಜಿಹಾದ್ ಮಾಡಿದ್ದರೇ ಹೊರತು ನಿಮ್ಮ ಪೂರ್ವಜರಲ್ಲ. ಫಡಣವೀಸ್ ಪೂರ್ವಜರು ಬ್ರಿಟಿಷರಿಗೆ ಪ್ರೇಮ ಪತ್ರ ಬರೆಯುತ್ತಿದ್ದರು. ಇಂಥವರು ನಮಗೆ ಜಿಹಾದ್ ಬಗ್ಗೆ ಪಾಠ ಮಾಡುತ್ತಾರೆಯೇ? ಪ್ರಜಾ ಪ್ರಭುತ್ವದಲ್ಲಿ ಮತ ಜಿಹಾದ್, ಧರ್ಮ ಯುದ್ಧ ಅಂತೆಲ್ಲಾ ಎಲ್ಲಿಂದ ಬರುತ್ತದೆ? ಮತ ಗಳಿಸಲು ಸಾಧ್ಯವಾಗದಿದ್ದಾಗ ಜಿಹಾದ್ ಅಂತೆಲ್ಲಾ ಮಾತನಾಡುತ್ತಾರೆ. ಶಾಸಕರನ್ನು ಖರೀದಿ ಮಾಡುತ್ತೀರಲ್ಲ, ನಿಮ್ಮನ್ನು ಕಳ್ಳರು ಎಂದು ನಾವು ಕರೆಯಬಹುದೇ?ಅಸಾದುದ್ದೀನ್ ಓವೈಸಿ, ಎಐಎಂಐಎಂ ಮುಖ್ಯಸ್ಥ, ಸಂಸದ
ನೋಡಿ, ಅವರು ರಜಾಕಾರ ವಂಶಸ್ಥರು. ರಜಾಕಾರು ಮಹಾರಾಷ್ಟ್ರದ ಜನರನ್ನು ಹಿಂಸಿಸಿದ್ದಾರೆ. ನಮ್ಮ ಜನರ ಭೂಮಿಯನ್ನು ಕೊಳ್ಳೆ ಹೊಡೆದಿದ್ದಾರೆ. ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದಾರೆ, ಕುಟುಂಬಗಳನ್ನು ನಾಶ ಮಾಡಿದ್ದಾರೆ. ಯಾವ ಮುಖ ಇಟ್ಟುಕೊಂಡು ಇವರು ನಮ್ಮ ಬಳಿ ಮಾತನಾಡುತ್ತಾರೆದೇವೇಂದ್ರ ಫಡಣವೀಸ್, ಮಹಾರಾಷ್ಟ್ರ ಉಪಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.