ADVERTISEMENT

ರಾಜಸ್ಥಾನ, ಛತ್ತೀಸಗಡದಲ್ಲಿಯೂ ಕಾಂಗ್ರೆಸ್‍ಗೆ ಮುನ್ನಡೆ 

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2018, 5:08 IST
Last Updated 11 ಡಿಸೆಂಬರ್ 2018, 5:08 IST
ಜೈಪುರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಹರ್ಷಾಚರಣೆ
ಜೈಪುರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಹರ್ಷಾಚರಣೆ   

ನವದೆಹಲಿ: ವಿಧಾನಸಭಾ ಚುನಾವಣೆ ಮತ ಎಣಿಕೆಯ ಮೊದಲ ಸುತ್ತಿನ ಫಲಿತಾಂಶ ಹೊರ ಬಿದ್ದಾಗ ರಾಜಸ್ಥಾನ, ಛತ್ತೀಸಗಡದಲ್ಲಿಯೂ ಕಾಂಗ್ರೆಸ್ ಮುನ್ನಡೆಸಾಧಿಸಿದೆ.ತೆಲಂಗಾಣದಲ್ಲಿ ಟಿಆರ್‌ಎಸ್ ಮುನ್ನಡೆಯಲ್ಲಿದ್ದುಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್- ಬಿಜೆಪಿ ಪೈಪೋಟಿ ನಡೆಸುತ್ತಿವೆ.

ಮಿಜೋರಾಂನಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ಇದ್ದು, ಇಲ್ಲಿ ಮಿಜೋ ನ್ಯಾಷನಲ್ ಫ್ರಂಟ್ ಮುನ್ನಡೆಯಲ್ಲಿದೆ.

ಕೇಂದ್ರ ಸರ್ಕಾರದಲ್ಲಿರುವ ಬಿಜೆಪಿ, ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಡದಲ್ಲಿ ಅಧಿಕಾರದಲ್ಲಿದೆ.ಹಾಗಾಗಿ ಕೇಂದ್ರ ಸರ್ಕಾರಕ್ಕೆ ಈ ಚುನಾವಣೆ ಅಗ್ನಿ ಪರೀಕ್ಷೆಯಾಗಲಿದೆ.

ADVERTISEMENT

ರಾಜಸ್ಥಾನದಲ್ಲಿ ಕಾಂಗ್ರೆಸ್ ಬಿಜೆಪಿಗೆ ತೀವ್ರ ಪೈಪೋಟಿಯನ್ನೊಡ್ಡಿದೆ.ಇಲ್ಲಿನ ಮುಖ್ಯಮಂತ್ರಿ ವಸುಂಧರಾ ರಾಜೇ ವಿರುದ್ದ ಕಾಂಗ್ರೆಸ್ ಕಿಡಿ ಕಾರುತ್ತಿದ್ದು, ರಾಜೇ ಬಗ್ಗೆ ಬಿಜೆಪಿಯಲ್ಲಿಯೂ ಭಿನ್ನಮತ ಇದೆ ಎಂಬ ಸುದ್ದಿಗಳು ಕೇಳಿ ಬಂದಿದ್ದವು. ಆದಾಗ್ಯೂ, ರಾಜಸ್ಥಾನದಲ್ಲಿ ವಸುಂಧರಾ ಅವರಿಗೆ ಸರಿ ಸಾಟಿಯಾಗುವ ಯಾವುದೇ ನಾಯಕರು ಇಲ್ಲ.

ಛತ್ತೀಸಗಡ ಬಿಜೆಪಿಯ ಭದ್ರಕೋಟೆಯಾಗಿದೆ. ಮತದಾನೋತ್ತರ ಸಮೀಕ್ಷೆಗಳು ರಮಣ್ ಸಿಂಗ್ ಸರ್ಕಾರ ಅಧಿಕಾರ ಮುಂದುವರಿಸುವುದಿಲ್ಲ ಎಂದು ಹೇಳಿದರೂ ಅಜಿತ್ ಜೋಗಿ- ಮಾಯಾವತಿ ಮೈತ್ರಿಯಿಂದಾಗಿ ವಿಪಕ್ಷಗಳ ಮತ ಹಂಚಿಕೆಯಾಗಿ ಬಿಜೆಪಿಗೆ ಅನುಕೂಲವಾಗಲಿದೆ ಎಂಬ ನಿರೀಕ್ಷೆಯಲ್ಲಿದೆ ಬಿಜೆಪಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.