ಪಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೋಮವಾರ ಪಾಟ್ನಾದ ಮಗಧ ಮಹಿಳಾ ಕಾಲೇಜಿನಲ್ಲಿ 504 ಹಾಸಿಗೆಯ ಮಹಿಳಾ ಹಾಸ್ಟೆಲ್ ಅನ್ನು ಉದ್ಘಾಟಿಸಿದರು.
ತಾವು ಇಂಜಿನಿಯರಿಂಗ್ ಓದುತ್ತಿದ್ದ ದಿನಗಳನ್ನು ನಿತೀಶ್ ಕುಮಾರ್ ಅವರು ಸಮಾರಂಭದಲ್ಲಿ ಮೆಲುಕು ಹಾಕಿದರು. ‘ನಾವು ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದಾಗ ನಮ್ಮ ತರಗತಿಯಲ್ಲಿ ಹುಡುಗಿಯರೇ ಇರಲಿಲ್ಲ. ಬಹಳ ಕೆಟ್ಟದಾಗಿತ್ತು. ನಮ್ಮ ತರಗತಿಗೆ ಯಾವುದೇ ಮಹಿಳೆ ಬಂದಾಗಲೆಲ್ಲಾ ಆಕೆಯನ್ನು ನೋಡಲು ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಸೇರುತ್ತಿದ್ದರು. ಆಗಿನ ಪರಿಸ್ಥಿತಿ ಹಾಗಿತ್ತು. ಈಗ ನೋಡಿ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಎಷ್ಟು ಹುಡುಗಿಯರು ಓದುತ್ತಿದ್ದಾರೆ? ’ ಎಂದು ಅವರು ಹೇಳಿದರು.
ಆ ದಿನಗಳಲ್ಲಿ ವಿದ್ಯಾರ್ಥಿನಿಯರು ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕೋರ್ಸ್‌ಗಳಿಗೆ ಬರುತ್ತಲೇ ಇರಲಿಲ್ಲ ಎಂದು ಅವರು ಹೇಳಿದರು. ಹಿಂದೆಲ್ಲ ಹೆಣ್ಣು ಮಕ್ಕಳು ಶಿಕ್ಷಣ ಪಡೆಯುತ್ತಿದ್ದದ್ದು ಕಡಿಮೆ ಎಂಬುದನ್ನು ನಿತೀಶ್ ತಮ್ಮ ಅನುಭವದ ಮೂಲಕ ವಿವರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.