ADVERTISEMENT

ಗುಂಡು ಹಾರಿಸಿ ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌ ಸಹಚರನನ್ನು ಬಂಧಿಸಿದ ಪೊಲೀಸರು

ಪಿಟಿಐ
Published 23 ನವೆಂಬರ್ 2023, 3:26 IST
Last Updated 23 ನವೆಂಬರ್ 2023, 3:26 IST
<div class="paragraphs"><p>ಬಂಧನ</p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಪ್ರಯಾಗರಾಜ್‌: ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌ ಸಹಚರ ಮೊಹಮ್ಮದ್‌ ನಫೀಸ್‌ನನ್ನು ಪ್ರಯಾಗರಾಜ್‌ ಪೊಲೀಸರು ಗುಂಡು ಹಾರಿಸಿ ಬುಧವಾರ ರಾತ್ರಿ ಬಂಧಿಸಿದ್ದಾರೆ.

ADVERTISEMENT

ನವಾಬ್‌ಗಂಜ್‌ ಪೊಲೀಸ್‌ ಠಾಣೆಯ ಅನಪುರ ಔಟ್‌ಪೋಸ್ಟ್‌ ಬಳಿ ತಪಾಸಣೆ ನಡೆಸುತ್ತಿದ್ದ ವೇಳೆ ಇಬ್ಬರು ವ್ಯಕ್ತಿಗಳಿದ್ದ ಕಾರು ಬ್ಯಾರಿಕೇಡ್‌ ಭೇದಿಸಿಕೊಂಡು ಮುಂದೆ ಸಾಗಿದ್ದು, ವ್ಯಕ್ತಿಗಳು ಪೊಲೀಸರ ಮೇಲೆ ಗುಂಡು ಹಾರಿಸಿದ್ದಾರೆ. ಈ ವೇಳೆ ಪೊಲೀಸರು ಪ್ರತಿದಾಳಿ ನಡೆಸಿದ್ದು, ಗುಂಡಿನ ಚಕಮಕಿ ನಡೆದಿದೆ.

ಪೊಲೀಸರ ಗುಂಡಿನ ದಾಳಿಯಲ್ಲಿ ಒಬ್ಬ ವ್ಯಕ್ತಿಯ ಕಾಲಿಗೆ ಗುಂಡು ತಗುಲಿದ್ದು, ಮತ್ತೊಬ್ಬ ಆರೋಪಿ ತಪ್ಪಿಸಿಕೊಂಡಿದ್ದಾನೆ. ಗಾಯಾಳುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಚಾರಣೆ ವೇಳೆ ಗಾಯಗೊಂಡಿರುವ ವ್ಯಕ್ತಿಯು ಉಮೇಶ್‌ ಪಾಲ್‌ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್‌ ನಫೀಸ್‌ ಎಂದು ತಿಳಿದುಬಂದಿದೆ. ಆರೋಪಿ ನಫೀಸ್‌ ಬಂಧನಕ್ಕೆ ಸಹಾಯ ಮಾಡಿದವರಿಗೆ ₹ 50,000 ಬಹುಮಾನ ನೀಡುವುದಾಗಿ ಪ್ರಯಾಗರಾಜ್‌ ಪೊಲೀಸರು ಘೋಷಿಸಿದ್ದರು.

ಬಿಎಸ್‌ಪಿ ಶಾಸಕ ರಾಜು ಪಾಲ್‌ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್‌ ಪಾಲ್‌ ಎಂಬುವವರನ್ನು ಹಾಡಹಗಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಹತ್ಯೆಗೆ ಬಳಸಿದ್ದ ಹುಂಡೈ ಕ್ರೆಟಾ ಕಾರು ಮೊಹಮ್ಮದ್‌ ನಫೀಸ್‌ ಎಂಬುವವರಿಗೆ ಸೇರಿದ್ದಾಗಿದ್ದು, ಘಟನೆ ಬಳಿಕ ನಫೀಸ್‌ ತಲೆಮರೆಸಿಕೊಂಡಿದ್ದ.

ಪ್ರಯಾಗರಾಜ್‌ನಲ್ಲಿ ಏಪ್ರಿಲ್‌ 15 ರಂದು ಅತೀಕ್‌ ಅಹ್ಮದ್‌ ಮತ್ತು ಅವರ ಸಹೋದರ ಅಶ್ರಫ್‌ ಅವರನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುವಾಗ ಹತ್ಯೆ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.