ADVERTISEMENT

ಪರಿಸರ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಭೇಟಿಗೆ ಮುಂದಾಗಿದ್ದ ಆತಿಶಿಗೆ ತಡೆ

ಪಿಟಿಐ
Published 1 ಅಕ್ಟೋಬರ್ 2024, 9:49 IST
Last Updated 1 ಅಕ್ಟೋಬರ್ 2024, 9:49 IST
ಆತಿಶಿ
ಆತಿಶಿ   

ನವದೆಹಲಿ: ಪೊಲೀಸ್ ವಶದಲ್ಲಿರುವ ಲಡಾಖ್‌ನ ಪರಿಸರ ಹೋರಾಟಗಾರ ಸೋನಮ್ ವಾಂಗ್‌ಚುಕ್ ಅವರ ಭೇಟಿಗೆ ಮುಂದಾಗಿದ್ದ ದೆಹಲಿ ಸಿಎಂ ಆತಿಶಿ ಅವರಿಗೆ ದೆಹಲಿಯ ಬವನಾ ಪೊಲೀಸ್ ಠಾಣೆ ಎದುರು ತಡೆಯೊಡ್ಡಲಾಗಿದೆ.

ಕಳೆದ ರಾತ್ರಿ ತಮ್ಮ ಬೆಂಬಲಿಗರ ಜೊತೆ ದೆಹಲಿ ಪ್ರವೇಶಿಸಲು ಮುಂದಾಗಿದ್ದ ವಾಂಗ್‌ಚುಕ್ ಅವರನ್ನು ವಶಕ್ಕೆ ಪಡೆಯಲಾಗಿತ್ತು.

ಮಧ್ಯಾಹ್ನ 1 ಗಂಟೆ ಸುಮಾರಿಗೆ ವಾಂಗ್‌ಚುಕ್ ಭೇಟಿಗೆ ತೆರಳಿದ್ದ ಆತಿಶಿಗೆ ಪೊಲೀಸರು ತಡೆಯೊಡ್ಡಿದ್ದಾರೆ ಎಂದು ಆಮ್ ಆದ್ಮಿ ಪಕ್ಷ ತಿಳಿಸಿದೆ.

ADVERTISEMENT

ದೆಹಲಿ–ಹರಿಯಾಣ ಗಡಿ ಬಳಿ ಇರುವ ಬವಾನಾ ಪೊಲೀಸ್ ಠಾಣೆಗೆ ಭದ್ರತೆ ಹೆಚ್ಚಿಸಲಾಗಿದೆ.

ಬಂಧಿತ ವಾಂಗ್‌ಚುಕ್ ಬೆಂಬಲಿಗರನ್ನು ಸಹ ದೆಹಲಿ ಗಡಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಇರಿಸಲಾಗಿದೆ.

ಲಡಾಖ್‌ಗೆ ಸಂವಿಧಾನದ 6ನೇ ಪರಿಚ್ಛೇದದ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸಿ ವಾಂಗ್‌ಚುಕ್ ಮತ್ತು ಅವರ ಬೆಂಬಲಿಗರು ದೇಶದ ರಾಜಧಾನಿ ನವದೆಹಲಿಗೆ ಪಾದಯಾತ್ರೆ ಮೂಲಕ ಆಗಮಿಸುತ್ತಿದ್ದರು. ದೆಹಲಿ ಪ್ರವೇಶಕ್ಕೂ ಮುನ್ನವೇ ಗಡಿಯಲ್ಲಿ ವಾಂಚ್‌ಚುಕ್ ಮತ್ತು ಅವರ 120 ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ತಿಂಗಳ ಹಿಂದೆ ಲೇಹ್‌ನಲ್ಲಿ ಆರಂಭವಾಗಿದ್ದ ‘ದೆಹಲಿ ಚಲೋ’ ಪಾದಯಾತ್ರೆಯ ನೇತೃತ್ವವನ್ನು ವಾಂಗ್‌ಚುಕ್ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.