ADVERTISEMENT

ಅಣುಶಕ್ತಿ ಆಯೋಗದ ಅಧ್ಯಕ್ಷರ ಅವಧಿ ಒಂದು ವರ್ಷ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2022, 11:02 IST
Last Updated 17 ಏಪ್ರಿಲ್ 2022, 11:02 IST
ಅಣುಶಕ್ತಿ ಆಯೋಗದ ಅಧ್ಯಕ್ಷ ಕೆ.ಎನ್‌.ವ್ಯಾಸ್ (ಐಎಎನ್‌ಎಸ್‌ ಚಿತ್ರ)
ಅಣುಶಕ್ತಿ ಆಯೋಗದ ಅಧ್ಯಕ್ಷ ಕೆ.ಎನ್‌.ವ್ಯಾಸ್ (ಐಎಎನ್‌ಎಸ್‌ ಚಿತ್ರ)   

ನವದೆಹಲಿ: ಅಣುಶಕ್ತಿ ಆಯೋಗದ ಅಧ್ಯಕ್ಷ ಕೆ.ಎನ್‌.ವ್ಯಾಸ್ ಅವರ ಅಧಿಕಾರದ ಅವಧಿಯನ್ನು ಒಂದು ವರ್ಷದ ಅವಧಿಗೆ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ನಿಗದಿಯಂತೆ ಮೇ 3, 2022ರಂದು ಅವರ ಅಧಿಕಾರವಧಿಯು ಅಂತ್ಯವಾಗಬೇಕಿತ್ತು.

ಅವರಿಗೆ ಸೇವಾವಧಿ ವಿಸ್ತರಣೆ ಸಿಗುತ್ತಿರುವುದು ಇದು ಎರಡನೇ ಬಾರಿ. ಅಣುಶಕ್ತಿ ಆಯೋಗದ ಮೊದಲ ಅಧ್ಯಕ್ಷರಾಗಿ ಸೆಪ್ಟೆಂಬರ್ 2018ರಲ್ಲಿ ನೇಮಕಗೊಂಡಿದ್ದರು.ಅವರು ಅಣುಶಕ್ತಿ ರಿಯಾಕ್ಟರ್‌ಗಳ ವಿನ್ಯಾಸ ಮತ್ತು ವಿಶ್ಲೇಷಣೆ ಕ್ಷೇತ್ರದಲ್ಲಿ ಪರಿಣತಿ ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT