ಇಂಫಾಲ: ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರ ಪಾರಂಪರಿಕ ಮನೆ ಮೇಲೆ ಗುರುವಾರ ರಾತ್ರಿ ಗುಂಪೊಂದು ದಾಳಿ ನಡೆಸಲು ಯತ್ನಿಸಿದೆ. ಭದ್ರತಾ ಪಡೆಗಳು ಇದನ್ನು ವಿಫಲಗೊಂಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಖ್ಯಮಂತ್ರಿ ಅವರು ಆ ಮನೆಯಲ್ಲಿ ವಾಸಿಸುತ್ತಿಲ್ಲ. ಅವರು ತಮ್ಮ ಅಧಿಕೃತ ನಿವಾಸದಲ್ಲಿ ನೆಲೆಸಿದ್ದಾರೆ.
ಇಲ್ಲಿನ ಹೈನ್ಗಂಗ್ ಪ್ರದೇಶದಲ್ಲಿರುವ ಮುಖ್ಯಮಂತ್ರಿಯವರ ಪಾರಂಪರಿಕ ನಿವಾಸದ ಮೇಲೆ ಗುಂಪು ದಾಳಿ ನಡೆಸಲು ಯತ್ನಿಸಿತು. ಈ ಗುಂಪನ್ನು ಭದ್ರತಾಪಡೆಗಳು 100 ಮೀಟರ್ ದೂರದಲ್ಲೇ ತಡೆದರು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಈ ಮನೆಗೆ ಬಾರಿ ಕಾವಲು ಇದ್ದರೂ ಅದರಲ್ಲಿ ಯಾರೂ ವಾಸಿಸುತ್ತಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.