ADVERTISEMENT

ಕೇರಳದಲ್ಲಿ ವ್ಯಾಪಕ ಮಳೆ: ಅಪಾಯದ ಮಟ್ಟ ತಲುಪಿದ ಮುಲ್ಲಪೆರಿಯಾರ್‌ ಜಲಾಶಯ

ಪಿಟಿಐ
Published 18 ಡಿಸೆಂಬರ್ 2023, 11:32 IST
Last Updated 18 ಡಿಸೆಂಬರ್ 2023, 11:32 IST
<div class="paragraphs"><p>ಮುಲ್ಲಪೆರಿಯಾರ್‌ ಜಲಾಶಯ (ಸಂಗ್ರಹ ಚಿತ್ರ)</p></div>

ಮುಲ್ಲಪೆರಿಯಾರ್‌ ಜಲಾಶಯ (ಸಂಗ್ರಹ ಚಿತ್ರ)

   

ಚಿತ್ರ ಕೃಪೆ– ಪಿಟಿಐ

ಇಡುಕ್ಕಿ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಇಡುಕ್ಕಿಯ ಮುಲ್ಲಪೆರಿಯಾರ್‌ ಜಲಾಶಯದ ನೀರಿನ ಮಟ್ಟ ಅಪಾಯದ ಹಂತಕ್ಕೆ ತಲುಪಿದೆ. ಈ ಹಿನ್ನೆಲೆಯಲ್ಲಿ 1 ಸಾವಿರ ಕ್ಯೂಸೆಕ್‌ ನೀರನ್ನು ಹೊರಬಿಡಲು ಅಧಿಕಾರಿಗಳು ಮುಂದಾಗಿದ್ದಾರೆ. 

ADVERTISEMENT

125 ವರ್ಷಗಳ ಹಳೆಯದಾದ ಈ ಜಲಾಶಯದ ಒಟ್ಟು ಸಾಮರ್ಥ್ಯ 142 ಅಡಿ ಮಾತ್ರ. ಈಗಾಗಲೇ ನೀರಿನ ಮಟ್ಟ ಸೋಮವಾರ ಬೆಳಿಗ್ಗೆಯ ಹೊತ್ತಿಗೆ 137.50 ಅಡಿಗೆ ತಲುಪಿದ್ದು, ಪ್ರಸ್ತುತ ನೀರಿನ ಹರಿವು 12 ಸಾವಿರ ಕ್ಯೂಸೆಕ್‌ ಇದೆ. ಹೀಗಾಗಿ ನಾಳೆ (ಮಂಗಳವಾರ) ವಿವಿಧ ಹಂತಗಳಲ್ಲಿ ಜಲಾಶಯದ ಬಾಗಿಲುಗಳನ್ನು ತೆರೆದು ಒಂದು ಸಾವಿರ ಕ್ಯೂಸೆಕ್‌ ನೀರನ್ನು ಹೊರಬಿಡಲು ತೀರ್ಮಾನಿಸಲಾಗಿದೆ. 

ಇಡುಕ್ಕಿ ವಿಪತ್ತು ನಿರ್ವಹಣಾ ಅಧಿಕಾರಿಗಳು, ಜಿಲ್ಲಾಧಿಕಾರಿ ಶೀಬಾ ಜಾರ್ಜ್‌ ಅವರೊಂದಿಗೆ ಚರ್ಚೆ ನಡೆಸಿ ಈ ನಿರ್ಧಾರ ಕೈಗೊಂಡಿದ್ದಾರೆ. ಜಲಾಶಯದಿಂದ ನೀರನ್ನು ಹೊರಬಿಡುತ್ತಿರುವ ಕಾರಣ ನದಿಪಾತ್ರದ ಜನರಿಗೆ ಎಚ್ಚರಿಕೆಯಿಂದ ಇರಲು ಸೂಚನೆ ನೀಡಲಾಗಿದೆ.

ಕಳೆದ ಕೆಲವು ದಿನಗಳಿಂದ ಕೇರಳ, ತಮಿಳುನಾಡಿನಾದ್ಯಂತ ಭಾರಿ ಮಳೆಯಾಗುತ್ತಿದೆ. ಭಾನುವಾರ ಭಾರತೀಯ ಹವಾಮಾನ ಇಲಾಖೆ ಕೇರಳದಲ್ಲಿ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.