ADVERTISEMENT

ಏರ್‌ ಏಷ್ಯಾ ಇಂಡಿಯಾಗೆ ₹ 20 ಲಕ್ಷ ದಂಡ

ಪಿಟಿಐ
Published 11 ಫೆಬ್ರುವರಿ 2023, 16:39 IST
Last Updated 11 ಫೆಬ್ರುವರಿ 2023, 16:39 IST
.
.   

ಮುಂಬೈ: ಪೈಲಟ್‌ಗಳ ತರಬೇತಿಗೆ ಸಂಬಂಧಿಸಿದ ಕೆಲವು ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಟಾಟಾ ಗ್ರೂಪ್ ಒಡೆತನದ ಬಜೆಟ್ ಕ್ಯಾರಿಯರ್ ಏರ್‌ಏಷ್ಯಾ ಇಂಡಿಯಾಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಶನಿವಾರ ₹20 ಲಕ್ಷ ದಂಡ ವಿಧಿಸಿದೆ.

ಡಿಜಿಸಿಎ ವಿಮಾನಯಾನದ ತರಬೇತಿ ಮುಖ್ಯಸ್ಥರನ್ನು ಮೂರು ತಿಂಗಳ ಅವಧಿಗೆ ಹುದ್ದೆಯಿಂದ ತೆಗೆದು ಹಾಕಲು ಆದೇಶಿಸಿದೆ ಮತ್ತು ಎಂಟು ನಿಯೋಜಿತ ಪರೀಕ್ಷಕರಿಗೆ (ಡಿಇ) ತಲಾ ₹ 3 ಲಕ್ಷ ದಂಡ ವಿಧಿಸಿದೆ.

ಡಿಜಿಸಿಎ ಆದೇಶವನ್ನು ಪರಿಶೀಲಿಸಲಾಗುತ್ತಿದೆ ಮತ್ತು ಅದರ ವಿರುದ್ಧ ಮೇಲ್ಮನವಿ ಸಲ್ಲಿಸುವ ಬಗ್ಗೆ ಪರಿಶೀಲಿಸಲಾಗುತ್ತಿದೆ. ಡಿಜಿಸಿಎ ಜೊತೆಗಿನ ಸಮನ್ವಯದೊಂದಿಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಏರ್‌ಏಷ್ಯಾ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.