ADVERTISEMENT

ಅಯೋಧ್ಯೆ: ಇಂದು 18 ಲಕ್ಷ ಹಣತೆ ಬೆಳಗಿ ದೀಪೋತ್ಸವ

ಪಿಟಿಐ
Published 22 ಅಕ್ಟೋಬರ್ 2022, 19:31 IST
Last Updated 22 ಅಕ್ಟೋಬರ್ 2022, 19:31 IST
ದೀಪೋತ್ಸವದ ಅಂಗವಾಗಿ ಅಯೋಧ್ಯೆಯ ರಾಮ್‌ ಕಿ ಪೌಡಿಯಲ್ಲಿ ಶನಿವಾರ ಸ್ಥಳೀಯರು ಹಣತೆಗಳನ್ನು ಜೋಡಿಸಿಟ್ಟಿದ್ದರು –ಪಿಟಿಐ ಚಿತ್ರ
ದೀಪೋತ್ಸವದ ಅಂಗವಾಗಿ ಅಯೋಧ್ಯೆಯ ರಾಮ್‌ ಕಿ ಪೌಡಿಯಲ್ಲಿ ಶನಿವಾರ ಸ್ಥಳೀಯರು ಹಣತೆಗಳನ್ನು ಜೋಡಿಸಿಟ್ಟಿದ್ದರು –ಪಿಟಿಐ ಚಿತ್ರ   

ಅಯೋಧ್ಯೆ: ದೀಪಾವಳಿ ಹಬ್ಬದ ಅಂಗವಾಗಿ ಅಯೋಧ್ಯೆಯಲ್ಲಿ ಭಾನುವಾರ ನಡೆಯಲಿರುವ ದೀಪೋತ್ಸವದಲ್ಲಿ 18 ಲಕ್ಷ ಹಣತೆಗಳನ್ನು ಬೆಳಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೀಪೋತ್ಸವದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವರು. ಕಾರ್ಯಕ್ರಮದಲ್ಲಿ ರಾಮಲೀಲಾ ಪ್ರದರ್ಶನವೂ ಇರಲಿದೆ ಎಂದು ಅಯೋಧ್ಯೆಯ ವಿಭಾಗೀಯ ಆಯುಕ್ತ ನವದೀಪ್‌ ರಿನ್ವಾ ಅವರು ತಿಳಿಸಿದ್ದಾರೆ.

ಸರಯೂ ನದಿ ತೀರದ ರಾಮ್‌ ಕಿ ಪೌಡಿಯಲ್ಲಿ 22 ಸಾವಿರ ಮಂದಿ ಸ್ವಯಂ ಸೇವಕರು 15 ಲಕ್ಷ ಹಣತೆಗಳನ್ನು ಬೆಳಗಿಸುವರು. ಇತರ ಹಣತೆಗಳನ್ನು ಪ್ರಮುಖ ಸ್ಥಳಗಳಲ್ಲಿ ಬೆಳಗಿಸಲಾಗುವುದು ಎಂದೂ ಅವರು ವಿವರಿಸಿದ್ದಾರೆ.

ADVERTISEMENT

‘ಅಯೋಧ್ಯೆಯು ಭವ್ಯ ದೀಪೋತ್ಸವಕ್ಕೆ ಸಜ್ಜಾಗಿದೆ. ಎಲ್ಲರಿಗೂ ಸ್ವಾಗತ’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಟ್ವೀಟ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.