ಅಯೋಧ್ಯೆ: ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಅಯೋಧ್ಯೆಯಲ್ಲಿ ನ.25ರಂದು ಧರ್ಮಸಭೆ ನಡೆಸಲು ಉದ್ದೇಶಿಸಿದ್ದು, ಇದರಲ್ಲಿ ಒಂದು ಲಕ್ಷ ರಾಮಭಕ್ತರು ಭಾಗವಹಿಸುವರು ಎಂದು ತಿಳಿಸಿದೆ. ಹೊರಗಿನಿಂದ ಇಷ್ಟು ಜನ ಬರುತ್ತಿರುವುದು ಆತಂಕ ಸೃಷ್ಟಿಸಿದೆ ಎಂದು ಮುಸ್ಲಿಮರು ಹೇಳಿದ್ದಾರೆ.
‘ಹೊರಗಿನಿಂದ ಒಂದು ಲಕ್ಷ ಜನ ಬರುತ್ತಿರುವುದು ನಮ್ಮಲ್ಲಿ ಆತಂಕ ಸೃಷ್ಟಿಸಿದೆ. ಪೊಲೀಸರು ಸರಿಯಾದ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸದಿರುವುದು ಭೀತಿಗೆ ಕಾರಣವಾಗಿದ್ದು, ಅಂದು ನಾವು ಊರನ್ನು ತೊರೆಯುವ ಯೋಚನೆಯಲ್ಲಿದ್ದೇವೆ’ ಎಂದು ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ. ಇವರು,ರಾಮ ಜನ್ಮಭೂಮಿ–ಬಾಬ್ರಿ ಮಸೀದಿ ವಿವಾದದ ಹಿರಿಯ ಅರ್ಜಿದಾರರಾಗಿರುವ ಹಾಶಿಂ ಅನ್ಸಾರಿಯವರ ಮಗ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.