ADVERTISEMENT

ಅಯೋಧ್ಯೆ: ಮೊದಲ ದೀಪಾವಳಿ ಆಚರಣೆಗೆ ರಾಮಮಂದಿರ ಸಜ್ಜು

ಪಿಟಿಐ
Published 28 ಅಕ್ಟೋಬರ್ 2024, 2:12 IST
Last Updated 28 ಅಕ್ಟೋಬರ್ 2024, 2:12 IST
<div class="paragraphs"><p>ಅಯೋಧ್ಯೆಯ ರಾಮಮಂದಿರದಲ್ಲಿ  ದೀಪೋತ್ಸವಕ್ಕೆ ಸಿದ್ಧತೆಗಳು ನಡೆಯುತ್ತಿವೆ</p></div>

ಅಯೋಧ್ಯೆಯ ರಾಮಮಂದಿರದಲ್ಲಿ ದೀಪೋತ್ಸವಕ್ಕೆ ಸಿದ್ಧತೆಗಳು ನಡೆಯುತ್ತಿವೆ

   

ಪಿಟಿಐ ಚಿತ್ರ

ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದ ಬಳಿಕ ಮೊದಲ ಬಾರಿಗೆ ದೀಪಾವಳಿ ಆಚರಿಸಲಾಗುತ್ತಿದ್ದು ಉತ್ತರ ಪ್ರದೇಶ ಸರ್ಕಾರ ಮತ್ತು ದೇಗುಲದ ಟ್ರಸ್ಟ್‌ ಸಕಲ ಸಿದ್ಧತೆ ಮಾಡಿಕೊಂಡಿದೆ. 

ADVERTISEMENT

ಸರಯೂ ನದಿಯ ತಟದಲ್ಲಿ 28 ಲಕ್ಷ ಪರಿಸರ ಸ್ನೇಹಿ ಹಣತೆಗಳಲ್ಲಿ ದೀಪ ಬೆಳಗಿಸುವ ಮೂಲಕ ಹೊಸ ದಾಖಲೆ ಸೃಷ್ಟಿಸುವ ಗುರಿ ಹೊಂದಿದೆ ಎಂದು ಸರ್ಕಾರ ಹೇಳಿದೆ. ಅಲ್ಲದೆ ರಾಮಮಂದಿರದಲ್ಲಿ ಮಸಿ ಮತ್ತು ಎಣ್ಣೆಯ ಕಲೆಗಳು ಬೀಳದಂತೆ ವಿಶೇಷ ಪರಿಸರ ಸ್ನೇಹಿ ಮೇಣದ ದೀಪಗಳನ್ನು ಬಳಸಲಾಗುತ್ತಿದೆ. ರಾಮಮಂದಿರಕ್ಕೆ ಹೂವಿನ ಅಲಂಕಾರ ಮಾಡಲಾಗುತ್ತಿದೆ. ಒಂದೊಂದು ಸಂಕೀರ್ಣವನ್ನು ವಿಭಿನ್ನವಾಗಿ ಅಲಂಕರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಈ ದೀಪಾವಳಿಯಲ್ಲಿ ಅಯೋಧ್ಯೆಯನ್ನು ಕೇವಲ ಧರ್ಮ ಮತ್ತು ನಂಬಿಕೆಯ ಕೇಂದ್ರವನ್ನಾಗಿ ಮಾಡದೆ, ಸ್ವಚ್ಛತೆ ಮತ್ತು ಪರಿಸರ ಪ್ರಜ್ಞೆಯ ಸಂಕೇತವನ್ನಾಗಿ ಮಾಡುವ ಗುರಿಯನ್ನು ದೇವಾಲಯ ಟ್ರಸ್ಟ್ ಹೊಂದಿದೆ ಎಂದು ಪ್ರಕಟಣೆ ತಿಳಿಸಿದೆ.

ಜತೆಗೆ ರಾಮ ಮಂದಿರದ ದೀಪೋತ್ಸವವನ್ನು ವೀಕ್ಷಿಸಲು ಅ.29ರಿಂದ ನ.1ರವರೆಗೆ ದೇವಾಲಯವನ್ನು ಭಕ್ತರಿಗೆ ಮುಕ್ತವಾಗಿಡಲಾಗುವುದು. ಗೇಟ್ ನಂ4 ಬಿ (ಲಗೇಜ್ ಸ್ಕ್ಯಾನರ್ ಪಾಯಿಂಟ್) ನಿಂದ ದೇವಾಲಯವನ್ನು ವೀಕ್ಷಿಸಬಹುದು ಎಂದು ಟ್ರಸ್ಟ್‌ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.