ADVERTISEMENT

ಅಯೋಧ್ಯೆ ತೀರ್ಪು: ಪೀಠದಲ್ಲಿದ್ದ ನ್ಯಾಯಮೂರ್ತಿ ನಜೀರ್‌ಗೆ ‘ಝಡ್’ ಶ್ರೇಣಿ ಭದ್ರತೆ

ಏಜೆನ್ಸೀಸ್
Published 17 ನವೆಂಬರ್ 2019, 15:51 IST
Last Updated 17 ನವೆಂಬರ್ 2019, 15:51 IST
   

ನವದೆಹಲಿ:ಅಯೋಧ್ಯೆಯ ರಾಮಜನ್ಮಭೂಮಿ–ಬಾಬರಿ ಮಸೀದಿ ಭೂ ವಿವಾದ ಪ್ರಕರಣಕ್ಕೆ ಸಂಬಂಧಿಸಿ ತೀರ್ಪು ನೀಡಿದ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್‌ಗೆ ‘ಝಡ್’ ಶ್ರೇಣಿ ಭದ್ರತೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮತ್ತು ಇತರ ಕೆಲವು ಸಂಘಟನೆಗಳಿಂದ ನಜೀರ್ ಹಾಗೂ ಅವರ ಕುಟುಂಬದವರಿಗೆ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವಾಲಯದ ಅಧಿಸೂಚನೆ ತಿಳಿಸಿದೆ.

ಕರ್ನಾಟಕ ಮತ್ತು ದೇಶದಾದ್ಯಂತ ನಜೀರ್ ಮತ್ತು ಕುಟುಂಬದವರಿಗೆ ‘ಝಡ್’ ಶ್ರೇಣಿ ಭದ್ರತೆ ಒದಗಿಸುವಂತೆ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮತ್ತು ಸ್ಥಳೀಯ ಪೊಲೀಸರಿಗೆಗೃಹ ಸಚಿವಾಲಯ ಈಗಾಗಲೇ ಸೂಚನೆ ನೀಡಿದೆ ಎಂದುಎಎನ್‌ಐವರದಿ ಮಾಡಿದೆ. ಗುಪ್ತಚರ ಇಲಾಖೆಯ ಸುಳಿವಿನ ಮೇರೆಗೆ ಸಚಿವಾಲಯ ಈ ಕ್ರಮ ಕೈಗೊಂಡಿದೆ ಎಂದು ವರದಿ ಉಲ್ಲೇಖಿಸಿದೆ.

ನಜೀರ್ ಅವರು ಬೆಂಗಳೂರು, ಮಂಗಳೂರು ಮತ್ತು ಕರ್ನಾಟಕದ ಯಾವುದೇ ಪ್ರದೇಶಕ್ಕೆ ಪ್ರಯಾಣಿಸುವಾಗಲೂ ಭದ್ರತೆಯನ್ನು ನೀಡುವಂತೆ ಸೂಚಿಸಲಾಗಿದೆ ಎಂದು ವರದಿ ಹೇಳಿದೆ.

ಎಸ್.ಅಬ್ದುಲ್‌ ನಜೀರ್ ಅವರುಕಾರ್ಕಳ ಸಮೀಪದ ಬೆಳುವಾಯಿ ಗ್ರಾಮದವರು. ಎರಡು ವರ್ಷಗಳ ಹಿಂದಷ್ಟೇ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ನೇಮಕಗೊಂಡಿದ್ದ ಇವರು, ಸುಪ್ರೀಂಕೋರ್ಟ್‌ನ ಏಕೈಕ ಮುಸ್ಲಿಂ ನ್ಯಾಯಮೂರ್ತಿ ಆಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.