ADVERTISEMENT

ಇ.ಡಿ. ವಿಚಾರಣೆಗೆ ಅಜರುದ್ದೀನ್‌ ಗೈರು

ಪಿಟಿಐ
Published 3 ಅಕ್ಟೋಬರ್ 2024, 23:10 IST
Last Updated 3 ಅಕ್ಟೋಬರ್ 2024, 23:10 IST
<div class="paragraphs"><p>ಮೊಹಮ್ಮದ್‌ ಅಜರುದ್ದೀನ್‌</p></div>

ಮೊಹಮ್ಮದ್‌ ಅಜರುದ್ದೀನ್‌

   

ಮೊಹಮ್ಮದ್‌ ಅಜರುದ್ದೀನ್‌

ಹೈದರಾಬಾದ್‌ : ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ, ಕಾಂಗ್ರೆಸ್‌ ಮುಖಂಡ ಮೊಹಮ್ಮದ್‌ ಅಜರುದ್ದೀನ್‌ ಹೈದರಾಬಾದ್‌ ಕ್ರಿಕೆಟ್‌ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಹಣಕಾಸಿನ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇ.ಡಿ) ವಿಚಾರಣೆಗೆ ಗುರುವಾರ ಹಾಜರಾಗಲಿಲ್ಲ.

ADVERTISEMENT

ಅಕ್ಟೋಬರ್‌ 3ರಂದು ಹಾಜರಾಗು ವಂತೆ ಅಜರುದ್ದೀನ್‌ ಅವರಿಗೆ ಇ.ಡಿ ನೋಟಿಸ್‌ ನೀಡಿತ್ತು. ‘ನನಗೆ ತನಿಖೆಗೆ ಹಾಜರಾಗಲು ಇನ್ನಷ್ಟು ಸಮಯ ಬೇಕು’ ಎಂದು ಅಜರುದ್ದೀನ್‌ ಅವರು ತನಿಖಾ ಸಂಸ್ಥೆಗೆ ಮನವಿ ಮಾಡಿದರು. ಆದ್ದರಿಂದ ಅಕ್ಟೋಬರ್‌ 8ರಂದು ವಿಚಾರಣೆಗೆ ಹಾಜರಾಗುವಂತೆ ಅಜರುದ್ದೀನ್‌ ಅವರಿಗೆ ಇ.ಡಿ ನೋಟಿಸ್‌ ನೀಡಿದೆ. ಅಜರುದ್ದೀನ್‌ ಅವರು ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಹಣಕಾಸಿನ ಅವ್ಯವಹಾರ ನಡೆದಿದೆ ಎನ್ನುವ ಆರೋಪದಲ್ಲಿ, ಕಳೆದ ವರ್ಷದ ನವೆಂಬರ್‌ನಲ್ಲಿ ತನಿಖಾ ಸಂಸ್ಥೆಯು ಕ್ರಿಕೆಟ್‌ ಸಂಸ್ಥೆ ಕಚೇರಿಯ ಮೇಲೆ ದಾಳಿ ನಡೆಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.