ನವದೆಹಲಿ: ದೇಶದ ಜನಸಂಖ್ಯೆ ನಿಯಂತ್ರಿಸುವುದಕ್ಕಾಗಿ ಕುಟುಂಬದ ಮೂರನೇ ಮಗುವಿಗೆ ಮತದಾನದ ಹಕ್ಕು ನಿಷೇಧಿಸಿ, ಸರ್ಕಾರದ ಸೌಲಭ್ಯಗಳನ್ನೂ ಅವರಿಗೆ ನೀಡಬೇಡಿ ಎಂದು ಯೋಗ ಗುರು ಬಾಬಾ ರಾಮದೇವ್ ಸಲಹೆ ನೀಡಿದ್ದಾರೆ.
ದೇಶದಾದ್ಯಂತ ಮದ್ಯದ ಉತ್ಪಾದನೆ, ಮಾರಾಟ ಮತ್ತು ಖರೀದಿಯನ್ನೂ ನಿಷೇಧಿಸಬೇಕು ಎಂದು ರಾಮದೇವ್ ಹೇಳಿದ್ದಾರೆ.
ಭಾನುವಾರ ಹರಿದ್ವಾರದಲ್ಲಿ ನಡೆದಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಾಬಾ, ಮುಂದಿನ 50 ವರ್ಷಗಳಲ್ಲಿ ಭಾರತದ ಜನಸಂಖ್ಯೆ 150 ಕೋಟಿ ಮೀರಬಾರದು. ಜನಸಂಖ್ಯಾ ಹೆಚ್ಚಳವನ್ನು ಸಹಿಸಿಕೊಳ್ಳಲು ದೇಶಕ್ಕೆ ಸಾಧ್ಯವಾಗುವುದಿಲ್ಲ. ಕುಟುಂಬದಲ್ಲಿನ ಮೂರನೇ ಮಗುವಿಗೆ ಮತದಾನದ ಹಕ್ಕು ನಿಷೇಧಿಸಿ ಮತ್ತುಚುನಾವಣೆಯಲ್ಲಿ ಸ್ಪರ್ಧಿಸದಂತೆ ಇರುವ ಕಾನೂನನ್ನು ದೇಶದಲ್ಲಿ ಜಾರಿಗೆ ತರಬೇಕು.ಸರ್ಕಾರದ ಯಾವುದೇ ಸೌಲಭ್ಯಗಳು ಇವರಿಗೆ ದಕ್ಕದಂತೆ ಮಾಡಿದರೆ ಜನಸಂಖ್ಯೆಯನ್ನು ನಿಯಂತ್ರಿಸಬಹುದು ಎಂದಿದ್ದಾರೆ.
ಅದೇ ವೇಳೆ ಯಾವ ಸಮುದಾಯದವರೇ ಆಗಿರಲಿ ಹೆಚ್ಚು ಮಕ್ಕಳನ್ನು ಹೆರಬಾರದು ಎಂದಿದ್ದಾರೆ ರಾಮದೇವ್.
ಹಸು ಕಳ್ಳ ಸಾಗಾಣಿಕೆ ಮಾಡುವವರಮತ್ತು ಗೋರಕ್ಷಕರ ನಡುವಿನ ಸಂಘರ್ಘ ತಡೆಯುವುದಕ್ಕಾಗಿ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದ ಅವರು, ಮಾಂಸಹಾರವೇ ಬೇಕು ಎನ್ನುವವರಿಗೆ ಹಲವು ರೀತಿಯ ಮಾಂಸಗಳು ಇವೆ ಎಂದಿದ್ದಾರೆ.
ಮುಸ್ಲಿಂ ರಾಷ್ಟ್ರಗಳುಮದ್ಯ ನಿಷೇಧಿಸಿದೆ. ಮುಸ್ಲಿಂ ರಾಷ್ಟ್ರಗಳು ಈ ರೀತಿ ನಿಷೇಧ ಮಾಡುವುದಾದರೆ ಭಾರತದಲ್ಲಿ ಯಾಕೆ ಸಾಧ್ಯವಾಗುವುದಿಲ್ಲ?ಭಾರತದಲ್ಲಿ ಮದ್ಯಕ್ಕೆ ಸಂಪೂರ್ಣ ನಿಷೇಧ ಹೇರಬೇಕು ಎಂದು ರಾಮದೇವ್ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.