ADVERTISEMENT

ಯೋಗ ಗುರು ಬಾಬಾ ರಾಮದೇವ ಮೇಣದ ಪ್ರತಿಮೆ ಅನಾವರಣ

ಪಿಟಿಐ
Published 30 ಜನವರಿ 2024, 14:01 IST
Last Updated 30 ಜನವರಿ 2024, 14:01 IST
<div class="paragraphs"><p>ಯೋಗ ಗುರು ಬಾಬಾ ರಾಮ್‌ದೇವ್‌&nbsp;ಮೇಣದ ಪ್ರತಿಮೆ ಅನಾವರಣ</p></div>

ಯೋಗ ಗುರು ಬಾಬಾ ರಾಮ್‌ದೇವ್‌ ಮೇಣದ ಪ್ರತಿಮೆ ಅನಾವರಣ

   

ನವದೆಹಲಿ: ಯೋಗ ಗುರು ಬಾಬಾ ರಾಮದೇವ ಅವರ ಆಳೆತ್ತರದ ಮೇಣದ ಪ್ರತಿಮೆಯನ್ನು ದೆಹಲಿಯಲ್ಲಿ ಅನಾವರಣಗೊಳಿಸಲಾಗಿದೆ. ತದನಂತರ ನ್ಯೂಯಾರ್ಕ್‌ನ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನಲ್ಲಿ ಪ್ರತಿಮೆ ಇರಿಸಲಾಗುತ್ತದೆ.

ವೃಕ್ಷಾಸನ ಭಂಗಿಯಲ್ಲಿ ಮೇಣದ ಪ್ರತಿಮೆಯನ್ನು ತಯಾರಿಸಲಾಗಿದ್ದು, ರಾಮದೇವ ಅವರು ಯೋಗಾಭ್ಯಾಸಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಲಾಗಿದೆ.

ADVERTISEMENT

ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಬಾಬಾ ರಾಮದೇವ ಭಾಗವಹಿಸಿದ್ದು, ಮೇಣದ ಪ್ರತಿಮೆಯ ಮುಂದೆ ಕೆಲವು ಆಸನಗಳನ್ನು ಮಾಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

‘ಈ ಮೇಣದ ಪ್ರತಿಮೆಯನ್ನು ನ್ಯೂಯಾರ್ಕ್‌ನ ಮ್ಯಾನ್‌ಹಟನ್‌ನ ಮ್ಯೂಸಿಯಂನಲ್ಲಿ ಇರಿಸಲಾಗುವುದು. ಅಭಿಮಾನಿಗಳು ಮ್ಯೂಸಿಯಂಗೆ ಬಂದು ಪ್ರತಿಮೆಯನ್ನು ಕಾಣಬಹುದು’ ಎಂದು ಮರ್ಲಿನ್ ಎಂಟರ್‌ಟೈನ್‌ಮೆಂಟ್ಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.