ADVERTISEMENT

ಎನ್‌ಸಿಪಿ ನಾಯಕ ಬಾಬಾ ಸಿದ್ದೀಕಿ ಹತ್ಯೆ: 25ನೇ ಆರೋಪಿ ಬಂಧನ

ಪಿಟಿಐ
Published 17 ನವೆಂಬರ್ 2024, 14:32 IST
Last Updated 17 ನವೆಂಬರ್ 2024, 14:32 IST
ಸಂಗ್ರಹ ಚಿತ್ರ 
ಸಂಗ್ರಹ ಚಿತ್ರ    

ಮುಂಬೈ: ಮಾಜಿ ಸಚಿವ ಹಾಗೂ ಎನ್‌ಸಿಪಿ (ಅಜಿತ್‌ ಪವಾರ್ ಬಣ) ನಾಯಕ ಬಾಬಾ ಸಿದ್ದೀಕಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಮಹಾರಾಷ್ಟ್ರದ ಅಕೋಲಾದಲ್ಲಿ ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಇದರೊಂದಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾದವರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

‘ಗುಜರಾತ್‌ನ ಅನಂದ್‌ ಜಿಲ್ಲೆಯ ಪೆಟ್ಲಾಡ್‌ ನಿವಾಸಿ ಸಲ್ಮಾನ್‌ಭಾಯ್‌ ಇಕ್ಬಾಲ್‌ಭಾಯ್‌ ವೊಹ್ರಾ ಬಂಧಿತ ಆರೋಪಿ. ಈತನು ಮೇ ತಿಂಗಳಿನಲ್ಲಿ ಬ್ಯಾಂಕ್‌ ಖಾತೆಯೊಂದನ್ನು ತೆರೆದಿದ್ದ. ಬಂಧಿತ ಆರೋಪಿಗಳಾದ ಗುರ್ಮೇಲ್‌ ಸಿಂಗ್‌, ರೂಪೇಶ್‌ ಮೊಹೋಲ್‌ ಹಾಗೂ ಹರಿಶಂಕರ್‌ ಅವರ ಸಹೋದರ ನರೇಶ್ ಕುಮಾರ್‌ಗೆ ಹಣವನ್ನು ನೀಡಿದ್ದ. ಅಲ್ಲದೇ ಪ್ರಕರಣದೊಂದಿಗೆ ನಂಟು ಹೊಂದಿರುವ ಅನೇಕರಿಗೂ ಈತ ಸಹಾಯ ಮಾಡಿದ್ದಾನೆ’ ಎಂದು ಅವರು ತಿಳಿಸಿದರು. 

ಪ್ರಕರಣದ ಮುಖ್ಯ ಆರೋಪಿ ಎಂದು ಗುರುತಿಸಲಾಗಿರುವ ಶೂಟರ್‌ ಶಿವಕುಮಾರ್ ಹಾಗೂ ಇತರ ನಾಲ್ವರು ಆರೋಪಿಗಳನ್ನು ಕೆಲ ದಿನಗಳ ಹಿಂದೆ ಉತ್ತರ ಪ್ರದೇಶದಲ್ಲಿ ಬಂಧಿಸಲಾಯಿತು. ಅ.12ರಂದು ಮುಂಬೈನಲ್ಲಿ ಸಿದ್ದೀಕಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಯಿತು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.