ಅಯೋಧ್ಯಾ: ಡಿಸೆಂಬರ್ 6ರ ಬಾಬರಿ ಮಸೀದಿ ಧ್ವಂಸ ದಿನದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ರಾಜ್ಯದಾದ್ಯಂತ ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ.
ಅಯೋಧ್ಯೆ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪು ನೀಡಿ ಡಿ. 6ಕ್ಕೆ ಒಂದು ತಿಂಗಳಾಗಲಿದೆ. ‘ದೇವಾಲಯಗಳ ನಗರಿ’ ಅಯೋಧ್ಯೆಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆಯೆಂದು ಉತ್ತರ ಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
‘ಅಯೋಧ್ಯೆ ತೀರ್ಪು ಪ್ರಕಟವಾದ ದಿನ ನ. 9ರಂದು ಹೇಗೆ ವ್ಯಾಪಕ ಬಂದೋಬಸ್ತ್ ಮತ್ತು ಕಟ್ಟೆಚ್ಚರ ವಹಿಸಿದ್ದೆವೋ, ಡಿ. 6ರಂದು ಅಷ್ಟೇ ಕಟ್ಟೆಚ್ಚರ ಮತ್ತು ಬಂದೋಬಸ್ತ್ ಮಾಡಲಾಗಿದೆ. ನ.9ರಂದು ರೂಪಿಸಿದ ಯೋಜನೆಯ ಮುಂದುವರಿಕೆಯಾಗಿ ಡಿ. 6ರ ಭದ್ರತಾ ವ್ಯವಸ್ಥೆ ಇರಲಿದೆ’ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪಿ.ವಿ. ರಾಮಶಾಸ್ತ್ರಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.