ADVERTISEMENT

ಬಾಬುಲ್‌ ಸುಪ್ರಿಯೊ ತೃಣಮೂಲ ಕಾಂಗ್ರೆಸ್‌ ನೂತನ ರಾಷ್ಟ್ರೀಯ ವಕ್ತಾರರಾಗಿ ಆಯ್ಕೆ

ಮಮತಾ ಬ್ಯಾನರ್ಜಿಗೆ ಧನ್ಯವಾದ ಸಲ್ಲಿಸಿದ ಟಿಎಂಸಿ ಶಾಸಕ

ಪಿಟಿಐ
Published 10 ಜುಲೈ 2022, 10:50 IST
Last Updated 10 ಜುಲೈ 2022, 10:50 IST
ಬಾಬುಲ್‌ ಸುಪ್ರಿಯೋ -ಪಿಟಿಐ ಚಿತ್ರ
ಬಾಬುಲ್‌ ಸುಪ್ರಿಯೋ -ಪಿಟಿಐ ಚಿತ್ರ   

ಕೋಲ್ಕತ್ತ: ತೃಣಮೂಲ ಕಾಂಗ್ರೆಸ್‌(ಟಿಎಂಸಿ) ಶಾಸಕ ಬಾಬುಲ್ ಸುಪ್ರಿಯೊ ಅವರನ್ನು ಪಕ್ಷದ ರಾಷ್ಟ್ರೀಯ ವಕ್ತಾರರನ್ನಾಗಿ ನೇಮಕ ಮಾಡಲಾಗಿದೆ ಎಂದು ಮಮತಾ ಬ್ಯಾನರ್ಜಿ ಬಣದ ಮೂಲಗಳು ತಿಳಿಸಿವೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸುಪ್ರಿಯೊ ಅವರು, ‘ಟಿಎಂಸಿ ರಾಷ್ಟ್ರೀಯ ವಕ್ತಾರನನ್ನಾಗಿ ನೇಮಕ ಮಾಡಿರುವುದಕ್ಕೆ ಗೌರವಾನ್ವಿತ ಮಮತಾ ಬ್ಯಾನರ್ಜಿ ಮತ್ತು ಅಭಿಷೇಕ್ ಬ್ಯಾನರ್ಜಿ ಅವರಿಗೆ ಧನ್ಯವಾದ.ನನಗೆ ವಹಿಸಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲು ಪ್ರಯತ್ನಿಸುತ್ತೇನೆ’ ಎಂದು ಹೇಳಿದ್ದಾರೆ.

‘ಪಶ್ಚಿಮ ಬಂಗಾಳದಿಂದ ಆಚೆಗೆ ಪಕ್ಷವನ್ನು ಬೆಳೆಸುವ ಉದ್ದೇಶದಿಂದ ಸುಪ್ರಿಯೊ ಅವರಿಗೆ ಹೊಸ ಜವಾಬ್ದಾರಿ ನೀಡಲಾಗಿದೆ. ಸುಪ್ರಿಯೊ ಅವರು ಗಾಯಕರಾಗಿ ಮತ್ತು ರಾಜಕಾರಣಿಯಾಗಿ ದೇಶದಾದ್ಯಂತ ಚಿರಪರಿಚಿತರು.ಪಕ್ಷದ ನೀತಿಗಳನ್ನು ರಾಷ್ಟ್ರೀಯ ವೇದಿಕೆಗೆ ಕೊಂಡೊಯ್ಯಲು ಇವರು ನೆರವಾಗುತ್ತಾರೆ’ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ADVERTISEMENT

ಬಿಜೆಪಿ ಸಂಸದ ಸುಪ್ರಿಯೊ ಅವರನ್ನು ಕಳೆದ ವರ್ಷ ಕೇಂದ್ರ ಸಚಿವ ಸ್ಥಾನದಿಂದ ತೆಗೆದುಹಾಕಲಾಗಿತ್ತು. ಈ ಬೆನ್ನಲ್ಲೇ ಅವರು ಟಿಎಂಸಿ ಸೇರ್ಪಡೆಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.