ADVERTISEMENT

ಬೇಟೆಗೆ ಬಲಿಯಾದ ಘೇಂಡಾಮೃಗವನ್ನು ಎಬ್ಬಿಸಲು ಪ್ರಯತ್ನಿಸುವ ಮರಿ:ವಿಡಿಯೊ ವೈರಲ್‌

​ಪ್ರಜಾವಾಣಿ ವಾರ್ತೆ
Published 3 ಜುಲೈ 2019, 9:59 IST
Last Updated 3 ಜುಲೈ 2019, 9:59 IST
   

ಬೆಂಗಳೂರು: ಬೇಟೆಗಾರರಿಗೆ ಬಲಿಯಾದ ಘೇಂಡಾಮೃಗವನ್ನು ಅದರ ಮರಿ ಮೇಲೆಬ್ಬಿಸಲು ಪ್ರಯತ್ನಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಅದನ್ನು ವೀಕ್ಷಿಸಿದ ನೆಟ್ಟಿಗರು ಮರಿಯ ವೇದನೆ ಕಂಡು ಮಮ್ಮಲ ಮರುಗಿದ್ದಾರೆ.

ಪ್ರವೀಣ್‌ ಕಸ್ವಾನ್‌ ಎಂಬ ಅರಣ್ಯ ಅಧಿಕಾರಿಯೊಬ್ಬರು ವಿಡಿಯೋವೊಂದನ್ನು ಮಂಗಳವಾರ ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ. ಬೇಟೆಗಾರರಿಂದ ಕೊಲ್ಲಲ್ಪಟ್ಟ ಘೇಂಡಾಮೃಗವನ್ನು ಅದರ ಮರಿ ಮೇಲೆಬ್ಬಿಸಲು ಪ್ರಯತ್ನಿಸುತ್ತದೆ. ಒಂದು ಬಾರಿ ಅತ್ತ ಕಡೆ, ಮತ್ತೊಂದು ಬಾರಿ ಇತ್ತ ಕಡೆ ಬಂದು ಮೆಲ್ಲನೆ ತಾಯಿಯನ್ನು ಕೊಂಬಿನಲ್ಲಿ ತಿವಿಯುವ ಮರಿ ನಂತರ ಸುಮ್ಮನಾಗುತ್ತದೆ.

ಈ ವಿಡಿಯೋ ಪ್ರಕಟಿಸಿರುವ ಪ್ರವೀಣ್‌ ಕಸ್ವಾನ್‌ ಘಟನೆ ನಡೆದಿದ್ದು ಎಲ್ಲಿ, ಏನು ಎಂಬ ಮಾಹಿತಿಯನ್ನು ಉಲ್ಲೇಖಿಸಿಲ್ಲ.

ಘೇಂಡಾಮೃಗಗಳ ಕೊಂಬಿಗೆ ಆನೆಯ ದಂತದಂತೆಯೇ ಬಾರಿ ಬೇಡಿಕೆ ಇದೆ. ಇದಕ್ಕೆ ಜಾಗತಿಕ ಕಳ್ಳ ಮಾರುಕಟ್ಟೆಯೂ ಇದೆ.ಇದೇ ಕಾರಣಕ್ಕೆ ಘೇಂಡಾಮೃಗಗಳನ್ನುವ್ಯಾಪಕವಾಗಿ ಭೇಟಿಯಾಡಲಾಗುತ್ತಿದ್ದು, ಸಂತತಿಯ ಅಸ್ತಿತ್ವಕ್ಕೇ ದಕ್ಕೆಯೊದಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.