ADVERTISEMENT

ನಮಗೆ ಶಾಂತಿ ಬೇಕು, ಹೇರಿಕೆಯಲ್ಲ: ಸಂಸದ ಶೇಕ್‌ ಅಬ್ದುಲ್‌ ರಶೀದ್‌

ಪಿಟಿಐ
Published 12 ಸೆಪ್ಟೆಂಬರ್ 2024, 15:55 IST
Last Updated 12 ಸೆಪ್ಟೆಂಬರ್ 2024, 15:55 IST
<div class="paragraphs"><p>ಶೇಕ್‌ ಅಬ್ದುಲ್‌ ರಶೀದ್‌</p></div>

ಶೇಕ್‌ ಅಬ್ದುಲ್‌ ರಶೀದ್‌

   

ಶ್ರೀನಗರ: ‘ಜಮ್ಮು ಮತ್ತು ಕಾಶ್ಮೀರದಲ್ಲಿ ನಾವು ಬಯಸುತ್ತಿರುವಂಥ ಶಾಂತಿ ಸ್ಥಾಪನೆಯಾಗಬೇಕೇ ಹೊರತು, ಮೋದಿ ಹೇಳಿದಂಥ ಶಾಂತಿಯಲ್ಲ’ ಎಂದು ಅವಾಮಿ ಇತ್ತೆಹಾದ್‌ ಪಾರ್ಟಿ (ಎಐಪಿ) ಮುಖ್ಯಸ್ಥ, ಸಂಸದ ಶೇಕ್‌ ಅಬ್ದುಲ್‌ ರಶೀದ್‌ ಗುರುವಾರ ಪ್ರಧಾನಿ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

ಸಾರ್ವಜನಿಕ ಸಭೆಯೊಂದರಲ್ಲಿ ಇಲ್ಲಿ ಮಾತನಾಡಿದ ಅವರು, ‘ನಮಲ್ಲಿ ಶಾಂತಿ ನೆಲಸಬೇಕು. ಇದಕ್ಕಾಗಿ ನಾವು ತೀವ್ರವಾಗಿ ಹಂಬಲಿಸುತ್ತಿದ್ದೇವೆ. ಹಾಗೆಂದ ಮಾತ್ರಕ್ಕೆ ಶಾಂತಿ ನೆಲಸುವಂತೆ ಮಾಡುತ್ತೇವೆ ಎಂದು ದೆಹಲಿಯವರು ನಮ್ಮ ಮೇಲೆ ಹೇರಿಕೆ ಮಾಡುವುದು ಬೇಡ. ಶಾಂತಿಯು ಘನತೆಯಿಂದ ಸಿಗಬೇಕು, ಸ್ಮಶಾನವಾಗಿ ಅಲ್ಲ’ ಎಂದು ಕಿಡಿ ಕಾರಿದರು.

ADVERTISEMENT

‘ನಮ್ಮ ಪಕ್ಷವು ಒಂದು ವೇಳೆ 40 ಸ್ಥಾನಗಳನ್ನು ಗಳಿಸಿದರೆ, ಕಾಶ್ಮೀರದ ಜನರ ಸಮಸ್ಯೆಗಳನ್ನು ಇಟ್ಟುಕೊಂಡು ಪ್ರಧಾನಿ ಮೋದಿ ನಿವಾಸದ ಎದುರು ಪ್ರತಿಭಟಿಸುತ್ತೇವೆ. ನಾವು ಕಾಶ್ಮೀರ ಜನರ ಧ್ವನಿಗೆ ದನಿಯಾಗುತ್ತೇವೆ’ ಎಂದರು.

‘ನಾನೊಬ್ಬ ಮೂಲಭೂತವಾದದಿಂದ ದೂರ ಉಳಿದಿರುವ ಇಸ್ಲಾಂವಾದಿ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ. ಭಾರತೀಯರ ಮೇಲೆ ನನಗೆ ಪ್ರೀತಿ ಇದೆ. ‘ವಸುದೈವ ಕುಟುಂಬಕಂ’ ಎನ್ನುವ ಪರಿಕಲ್ಪನೆಯನ್ನು ನಂಬುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.