ADVERTISEMENT

ಉತ್ತರಾಖಂಡ: ಆರು ತಿಂಗಳ ಬಳಿಕ ಬಾಗಿಲು ತೆರೆದ ಬದರಿನಾಥ ದೇಗುಲ

ಪಿಟಿಐ
Published 12 ಮೇ 2024, 3:00 IST
Last Updated 12 ಮೇ 2024, 3:00 IST
<div class="paragraphs"><p>ಬದರಿನಾಥ ದೇವಾಲಯ </p></div>

ಬದರಿನಾಥ ದೇವಾಲಯ

   

ಚಮೋಲಿ: ಉತ್ತರಾಖಂಡದ ಚಮೋಲಿಯಲ್ಲಿರುವ ಬದರಿನಾಥ ದೇವಾಲಯದ ಬಾಗಿಲನ್ನು ಇಂದು (ಭಾನುವಾರ) ಬೆಳಿಗ್ಗೆ 6 ಗಂಟೆಗೆ ತೆರೆಯಲಾಯಿತು.

ಈ ವೇಳೆ ವೇದ ಘೋಷಗಳು ಮತ್ತು ನೆರೆದಿದ್ದ ನೂರಾರು ಭಕ್ತರಿಂದ 'ಬದರಿ ವಿಶಾಲ್ ಲಾಲ್ ಕೀ ಜೈ' ಘೋಷಣೆಗಳು ಪ್ರತಿಧ್ವನಿಸಿದವು.

ADVERTISEMENT

ಆರು ತಿಂಗಳ ಬಳಿಕ ಬದರಿನಾಥ ದೇವಾಲಯವನ್ನು ಇಂದು ಭಕ್ತರ ದರ್ಶನಕ್ಕೆ ತೆರೆಯಲಾಗಿದ್ದು, ದೇಗುಲವನ್ನು ಹೂವುಗಳಿಂದ ಅಲಂಕರಿಸಲಾಗಿದೆ.

ನವೆಂಬರ್ 18 ರಂದು ಚಳಿಗಾಲದ ಆರಂಭದಲ್ಲಿ ದೇವಾಲಯದ ದ್ವಾರಗಳನ್ನು ಮುಚ್ಚಲಾಗಿತ್ತು.

ಉತ್ತರಾಖಂಡದ ನಾಲ್ಕು ಧಾಮಗಳ ಪೈಕಿ ಮೂರು ಧಾಮಗಳಾದ ಕೇದಾರನಾಥ, ಗಂಗೋತ್ರಿ, ಯಮುನೋತ್ರಿ ಧಾಮಗಳ ಬಾಗಿಲುಗಳನ್ನು ಕಳೆದ ಶುಕ್ರವಾರ ಅಕ್ಷಯ ತೃತೀಯ ಸಂದರ್ಭದಲ್ಲಿ ತೆರೆಯಲಾಗಿತ್ತು. ಇಂದು ಬದರಿನಾಥದಲ್ಲಿ ಬಾಗಿಲು ತೆರೆಯಲಾಗಿದ್ದು ಚಾರ್‌ಧಾಮಗಳಿಗೆ ಭಕ್ತರು ಭೇಟಿ ನೀಡಬಹುದಾಗಿದೆ.

ಬದರಿನಾಥ ಯಾತ್ರೆಯು ಹಿಂದೂ ಧರ್ಮದಲ್ಲಿ ಪ್ರಮುಖವಾದ ತೀರ್ಥಯಾತ್ರೆಯಾಗಿದೆ. ಬದರಿನಾಥ ದೇಗುಲವು ಸಮುದ್ರ ಮಟ್ಟದಿಂದ 3,133 ಮೀಟರ್ (10,279 ಅಡಿ) ಎತ್ತರದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.