ADVERTISEMENT

ಜಾಮೀನು ಮಂಜೂರಿಗೆ ಕಾರಣ ಉಲ್ಲೇಖ ಅಗತ್ಯ: ಸುಪ್ರೀಂ ಕೋರ್ಟ್

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 16:19 IST
Last Updated 11 ಜುಲೈ 2024, 16:19 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಸಕಾರಣವನ್ನು ಉಲ್ಲೇಖಿಸದೇ ಜಾಮೀನು ಮಂಜೂರು ಮಾಡುವುದು ನಿರಾಸಕ್ತಿಯನ್ನು ತೋರಿಸುತ್ತದೆ. ಜಾಮೀನು ನೀಡುವುದು ವಿವೇಚನಾಧಿಕಾರ ಆಗಿದ್ದರೂ, ಆ ಪ್ರಕ್ರಿಯೆ ನ್ಯಾಯಾಂಗ ಪ್ರಕ್ರಿಯೆಯ ಅನುಸಾರವೇ ನಡೆಯಬೇಕು ಎಂದು ಸುಪ್ರೀಂ ಕೋರ್ಟ್ ಗುರುವಾರ ಅಭಿಪ್ರಾಯ ವ್ಯಕ್ತಪಡಿಸಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಮತ್ತು ಮನೋಜ್‌ ಮಿಶ್ರಾ ಅವರಿದ್ದ ನ್ಯಾಯಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಕೊಲೆ ಮತ್ತು ಅಪಹರಣ ಪ್ರಕರಣದಲ್ಲಿ ತೀವ್ರವಾದಿ ಸಂಘಟನೆಯ ಸೇರಿದ್ದ ಆರೋಪಿ ಅನಿಲ್‌ ಗಂಜು ಎಂಬವರಿಗೆ ಜಾರ್ಖಂಡ್‌ ಹೈಕೋರ್ಟ್‌ 2023ರ ಏಪ್ರಿಲ್ 26ರಂದು ನೀಡಿದ್ದ ಜಾಮೀನನ್ನು ರದ್ದುಪಡಿಸಿತು.

ADVERTISEMENT

‘ಜಾಮೀನು ನೀಡುವ ಅಧಿಕಾರ ಸಿಆರ್‌ಪಿಸಿ ಸೆಕ್ಷನ್‌ 439ರಲ್ಲಿ ಸ್ಪಷ್ಟವಾಗಿದೆ. ಅದು ಕೋರ್ಟ್‌ನ ವಿವೇಚನಾಧಿಕಾರ. ಅದನ್ನು ನ್ಯಾಯಾಂಗ ಪ್ರಕ್ರಿಯೆಯಡಿ ಇರಬೇಕು. ಸಹಜ ಕಾರ್ಯವಾಗಿ ಅಲ್ಲ’ ಎಂದು ಕೋರ್ಟ್‌ ಹೇಳಿತು.

ಜಾಮೀನು ನೀಡಿದ್ದನ್ನು ಜಾರ್ಖಂಡ್‌ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.