ADVERTISEMENT

ಕೊರೊನಾ: ಮಹಾರಾಷ್ಟ್ರದ ವಾಹುಜ್‌ ಬಜಾಜ್ ಘಟಕದಲ್ಲಿ 140 ಮಂದಿಗೆ ಸೋಂಕು

ಪಿಟಿಐ
Published 27 ಜೂನ್ 2020, 2:57 IST
Last Updated 27 ಜೂನ್ 2020, 2:57 IST
ಕೊರೊನಾ ಪಾಸಿಟಿವ್ (ಸಾಂದರ್ಭಿಕ ಚಿತ್ರ)
ಕೊರೊನಾ ಪಾಸಿಟಿವ್ (ಸಾಂದರ್ಭಿಕ ಚಿತ್ರ)   

ಮುಂಬೈ: ಮಹಾರಾಷ್ಟ್ರದ ಔರಂಗಾಬಾದ್‌ನ ವಾಹುಜ್‌ನಲ್ಲಿರುವ ಘಟಕದಲ್ಲಿ 140 ಕೊರೊನಾ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿವೆ ಎಂದು ಬಜಾಜ್ ಆಟೊ ಕಂಪನಿ ಶುಕ್ರವಾರ ತಿಳಿಸಿದೆ. ಈ ಘಟಕದಲ್ಲಿ 8,100ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಸೋಂಕಿನಿಂದಾಗಿ ಇಬ್ಬರು ಈಗಾಗಲೇ ಮೃತಪಟ್ಟಿದ್ದಾರೆ.

ವಾಹುಜ್‌ ಘಟಕದಲ್ಲಿ 8,100ಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ ಕೆಲಸಗಾರರಿದ್ದಾರೆ ಎಂದು ಕಂಪನಿಯ ಸಿಎಚ್‌ಆರ್‌ಒ ರವಿ ಕಿರಣ್ ರಾಮಸ್ವಾಮಿ ತಿಳಿಸಿದ್ದಾರೆ.

‘ಸದ್ಯ ಈ ಘಟಕದಲ್ಲಿ 140 ಪ್ರಕರಣ ಪತ್ತೆಯಾಗಿದ್ದು, ಇದು ನಮ್ಮಲ್ಲಿರುವ ಸಿಬ್ಬಂದಿಯ ಶೇ 2ಕ್ಕಿಂತಲೂ ಕಡಿಮೆ. ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಹಿನ್ನೆಲೆಯುಳ್ಳ ಇಬ್ಬರು ಸೋಂಕಿತರು ಸಾವಿಗೀಡಾಗಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಘಟಕವನ್ನು ಎರಡು ದಿನಗಳ ಕಾಲ ಮುಚ್ಚಲಾಗುವುದು ಎಂದು ಔರಂಗಾಬಾದ್ ಜಿಲ್ಲಾಧಿಕಾರಿ ಹೇಳಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ರಾಮಸ್ವಾಮಿ, ಲಾಕ್‌ಡೌನ್ ತೆರವಾದ ಬಳಿಕ ನಾವು ಪ್ರತಿ ಶನಿವಾರ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸುತ್ತಿಲ್ಲ. ಭಾನುವಾರ ರಜೆ ಇದೆ. ಉಳಿದ ದಿನಗಳಲ್ಲಿ ಎಂದಿನಂತೆ ಘಟಕ ಕಾರ್ಯನಿರ್ವಹಿಸಲಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.