ADVERTISEMENT

ಬಾಲೇಶ್ವರ ರೈಲು ದುರಂತ; ರೈಲ್ವೆಯ 7 ನೌಕರರು ಅಮಾನತು

ಪಿಟಿಐ
Published 12 ಜುಲೈ 2023, 13:56 IST
Last Updated 12 ಜುಲೈ 2023, 13:56 IST
   

ಭುವನೇಶ್ವರ: ಒಡಿಶಾದಲ್ಲಿ ಜೂನ್‌ 2ರಂದು ನಡೆದಿದ್ದ ತ್ರಿವಳಿ ರೈಲು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿರುವ ರೈಲ್ವೆಯ ಏಳು ನೌಕರರನ್ನು ಅಮಾನತು ಮಾಡಲಾಗಿದೆ. ಇವರಲ್ಲಿ ಸಿಬಿಐ ಬಂಧಿಸಿರುವ ಮೂವರು ನೌಕರರು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪಘಾತದಲ್ಲಿ 293 ಜನರು ಮೃತಪಟ್ಟು, 1,200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

‘ಅಧಿಕಾರಿಗಳು ಎಚ್ಚರ ವಹಿಸಿದ್ದರೆ ಅಪಘಾತ ನಡೆಯುವುದನ್ನು ತಪ್ಪಿಸಬಹುದಿತ್ತು’ ಎಂದು ಆಗ್ನೇಯ ರೈಲ್ವೆಯ ಜನರಲ್ ಮ್ಯಾನೇಜರ್ ಅನಿಲ್‌ಕುಮಾರ್‌ ಮಿಶ್ರಾ ಪತ್ರಕರ್ತರಿಗೆ ತಿಳಿಸಿದರು.

ADVERTISEMENT

ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ರೈಲ್ವೆಯ ಹಿರಿಯ ಸೆಕ್ಷನ್ ಎಂಜಿನಿಯರ್ (ಸಿಗ್ನಲ್) ಅರುಣ್ ಕುಮಾರ್ ಮಹಂತ, ಸೆಕ್ಷನ್ ಎಂಜಿನಿಯರ್ ಮೊಹಮ್ಮದ್ ಅಮೀರ್ ಖಾನ್ ಮತ್ತು ತಂತ್ರಜ್ಞ ಪಪ್ಪು ಕುಮಾರ್ ಅವರನ್ನು ಸಿಬಿಐ, ಬುಧವಾರದಿಂದ ನಾಲ್ಕು ದಿನಗಳ ಅವಧಿಗೆ ತನ್ನ ಕಸ್ಟಡಿಗೆ ತೆಗೆದುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.