ಬಂಗಾರಂ/ ಕಾವಾರಟ್ಟಿ (ಲಕ್ಷದ್ವೀಪ): ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಬಳಿಕ ಲಕ್ಷ ದ್ವೀಪವು ಪ್ರಮುಖ ಪ್ರವಾಸೋದ್ಯಮ ತಾಣವಾಗಿ ಮಾರ್ಪಟ್ಟಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಉಳಿದುಕೊಂಡಿದ್ದ ಬಂಗಾರಂ ದ್ವೀಪ ಮಾತ್ರವಲ್ಲದೆ, ಸಮೀಪದ ಥಿನ್ನಕರ ದ್ವೀಪವೂ ಪ್ರವಾಸಿಗರ ಗಮನ ಸೆಳೆದಿದೆ.
ಮಾಲ್ದೀವ್ಸ್ ಜೊತೆಗಿನ ರಾಜತಾಂತ್ರಿಕ ಬಿಕ್ಕಟ್ಟು ಸಹ ಲಕ್ಷದ್ವೀಪದ ಪ್ರವಾಸೋದ್ಯಮಕ್ಕೆ ಭಾರಿ ಉತ್ತೇಜನ ನೀಡಿದೆ.
ಆದರೆ, ಅಲ್ಲಿ ಮೂಲಸೌಕರ್ಯಗಳು ಮತ್ತು ಸಾರಿಗೆ–ಸಂಪರ್ಕ ಕೊರತೆ ಇದೆ. ಸದ್ಯ ಲಕ್ಷದ್ವೀಪ ಸಮೂಹದ ಅಗತ್ತಿ ದ್ವೀಪಕ್ಕೆ ಅಲಿಯನ್ಸ್ ವಿಮಾನಯಾನ ಸಂಸ್ಥೆಯ ಒಂದು ವಿಮಾನ ಮಾತ್ರ ನಿತ್ಯ ಸಂಚರಿಸುತ್ತದೆ. ಬುಧವಾರ ಮತ್ತು ಭಾನುವಾರ ಮಾತ್ರ ಎರಡು ಬಾರಿ ಸಂಚರಿಸುತ್ತದೆ. ಇದರ ಹೊರತಾಗಿ ಕೊಚ್ಚಿ ಮತ್ತು ಕವರತ್ತಿ ನಡುವೆ ವಾರದಲ್ಲಿ ಹಡಗು ಮಾತ್ರ ಸಂಚರಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.