ADVERTISEMENT

Bangla Unrest: ಬಾಂಗ್ಲಾದಲ್ಲಿ ಅಶಾಂತಿ; ಅಸ್ಸಾಂ ಗಡಿಯಲ್ಲಿ ಹೈ ಅಲರ್ಟ್‌

ಪಿಟಿಐ
Published 6 ಆಗಸ್ಟ್ 2024, 15:29 IST
Last Updated 6 ಆಗಸ್ಟ್ 2024, 15:29 IST
<div class="paragraphs"><p>ಬಿಎಸ್‌ಎಫ್‌ ಅಧಿಕಾರಿಗಳು</p></div>

ಬಿಎಸ್‌ಎಫ್‌ ಅಧಿಕಾರಿಗಳು

   

–ಪಿಟಿಐ ಚಿತ್ರ

ಗುವಾಹಟಿ: ನೆರೆಯ ದೇಶದಲ್ಲಿ ಕ್ಷಿಪ್ರಕ್ರಾಂತಿ ನಡೆದಿದ್ದು, ಅಸ್ಸಾಂನ ಭಾರತ–ಬಾಂಗ್ಲಾದೇಶದ ಗಡಿಯಲ್ಲಿ ಗಡಿ ಭದ್ರತಾ ಪಡೆಯು (ಬಿಎಸ್‌ಎಫ್‌) ಭದ್ರತೆಯನ್ನು ಪರಿಶೀಲಿಸಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ADVERTISEMENT

ಗಡಿಯುದ್ದಕ್ಕೂ ಎಲ್ಲ ಹಂತದ ಕಮಾಂಡರ್‌ಗಳು ಹೆಚ್ಚಿನ ಜಾಗರೂಕತೆ ವಹಿಸುವಂತೆ ಗುವಾಹಟಿ ವ್ಯಾಪ್ತಿಯ ಬಿಎಸ್‌ಎಫ್‌ ಪಡೆಗೆ ಸೂಚಿಸಲಾಗಿದೆ. ಗುಪ್ತಚರ ಕಾರ್ಯಾಚರಣೆಗಳನ್ನು ತೀವ್ರಗೊಳಿಸಲಾಗಿದೆ ಎಂದು ಗಡಿ ಭದ್ರತಾ ಪಡೆಯ ವಕ್ತಾರರು ಹೇಳಿದ್ದಾರೆ.

ಭಾರತ–ಬಾಂಗ್ಲಾದೇಶದ ನಡುವಿನ ಅಂತರರಾಷ್ಟ್ರೀಯ ಗಡಿಯು 4,096 ಕಿ.ಮೀ ದೂರ ಇದ್ದು, ಗುವಾಹಟಿಯ ಬಿಎಸ್‌ಎಫ್‌ ವ್ಯಾಪ್ತಿಗೆ 509 ಕಿ.ಮೀ. ಬರಲಿದೆ. ಈ ಗಡಿ ರಕ್ಷಣೆಗಾಗಿ 11 ಬೆಟಾಲಿಯನ್‌ ಹಾಗೂ ಜಲಯೋಧರ (ವಾಟರ್ ವಿಂಗ್‌) ತಂಡವೊಂದನ್ನು ನಿಯೋಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.