ADVERTISEMENT

ಬಾಂಗ್ಲಾದೇಶಿಯರು, ರೋಹಿಂಗ್ಯಾ ನುಸುಳುಕೋರರಿಗೆ ಜೆಎಂಎಂ ನೆರವು: ಮೋದಿ ಆರೋಪ

ಜೆಮ್‌ಶೆಡ್‌ಪುರದಲ್ಲಿ ನಡೆದ ‘ಪರಿವರ್ತನ್‌ ಮಹಾರ‍್ಯಾಲಿ’ಯಲ್ಲಿ ಪ್ರಧಾನಿ ಕಿಡಿ

ಪಿಟಿಐ
Published 15 ಸೆಪ್ಟೆಂಬರ್ 2024, 13:12 IST
Last Updated 15 ಸೆಪ್ಟೆಂಬರ್ 2024, 13:12 IST
<div class="paragraphs"><p>ಜೆಮ್‌ಶೆಡ್‌ಪುರದಲ್ಲಿ ಭಾನುವಾರ ನಡೆದ ಬೃಹತ್‌ ರ‍್ಯಾಲಿ ವೇಳೆ ಅಭಿಮಾನಿಗಳತ್ತ ಕೈಬೀಸಿದ ಪ್ರಧಾನಿ ನರೇಂದ್ರ ಮೋದಿ</p></div>

ಜೆಮ್‌ಶೆಡ್‌ಪುರದಲ್ಲಿ ಭಾನುವಾರ ನಡೆದ ಬೃಹತ್‌ ರ‍್ಯಾಲಿ ವೇಳೆ ಅಭಿಮಾನಿಗಳತ್ತ ಕೈಬೀಸಿದ ಪ್ರಧಾನಿ ನರೇಂದ್ರ ಮೋದಿ

   

–ಪಿಟಿಐ ಚಿತ್ರ

ಜೆಮ್‌ಶೆಡ್‌ಪುರ, ಜಾರ್ಖಂಡ್‌: ‘ಮತಬ್ಯಾಂಕ್‌ ರಾಜಕಾರಣಕ್ಕಾಗಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಜೆಎಂಎಂ ನೇತೃತ್ವದ ಸರ್ಕಾರವು ಬಾಂಗ್ಲಾದೇಶ ಹಾಗೂ ರೋಹಿಂಗ್ಯಾ ನುಸುಳುಕೋರರನ್ನು ರಕ್ಷಿಸುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು.

ADVERTISEMENT

ಬಿಜೆಪಿಯಿಂದ ಇಲ್ಲಿನ ಗೋಪಾಲ್‌ ಮೈದಾನದಲ್ಲಿ ಆಯೋಜಿಸಿದ್ದ ‘ಪರಿವರ್ತನ್‌ ಮಹಾರ‍್ಯಾಲಿ’ ಉದ್ದೇಶಿಸಿ ಮಾತನಾಡಿದ ಅವರು, ‘ನೆರೆರಾಷ್ಟ್ರಗಳಿಂದ ಬರುತ್ತಿರುವ ನುಸುಳುಕೋರರು ಜಾರ್ಖಂಡ್‌ ಪಾಲಿಗೆ ದೊಡ್ಡ ಆತಂಕ ತಂದೊಡ್ಡುತ್ತಿದ್ದು, ಸಂಥಾಲ್‌ ಪರಗಣ, ಕೊಲ್ಹಾನ್ ಪ್ರಾಂತ್ಯದಲ್ಲಿ ಭೌಗೋಳಿಕ ಚಿತ್ರಣವನ್ನೇ ಬದಲಾಯಿಸುತ್ತಿದ್ದಾರೆ. ರಾಜ್ಯದ ಬುಡಕಟ್ಟು ಸಮುದಾಯಗಳ ಜನಸಂಖ್ಯೆ ಕುಸಿತವಾಗುತ್ತಿದೆ. ನುಸುಳುಕೋರರು ಪಂಚಾಯತ್‌ ವ್ಯವಸ್ಥೆಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದ್ದು, ಜನರ ಭೂಮಿ ಕಸಿದುಕೊಂಡು, ರಾಜ್ಯದ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯವೆಸಗುತ್ತಿದ್ದಾರೆ’ ಎಂದು ಕಿಡಿಕಾರಿದರು.

‘ನುಸುಳುಕೋರರಿಗೆ ಜೆಎಂಎಂ ಪಕ್ಷವು ನೆರವು ನೀಡುತ್ತಿದೆ. ಹೀಗಾಗಿಯೇ ಅವರು ಇಲ್ಲಿ ಪ್ರಭಾವಿಗಳಾಗುತ್ತಿದ್ದಾರೆ. ಜೆಎಂಎಂ, ಆರ್‌ಜೆಡಿ ಹಾಗೂ ಕಾಂಗ್ರೆಸ್‌ ಪಕ್ಷಗಳು ‘ಜಾರ್ಖಂಡ್‌ ಜನರ ಪಾಲಿಗೆ ಅತಿ ದೊಡ್ಡ ಶತ್ರುಗಳಾಗಿದ್ದಾರೆ’ ಎಂದು ಆರೋಪಿಸಿದ ಪ್ರಧಾನಿ ಮೋದಿ, ಅಧಿಕಾರದ ಹಪಾಹಪಿಯಿಂದ, ಮತ ಬ್ಯಾಂಕ್‌ ರಾಜಕಾರಣ ಮಾಡುತ್ತಿದ್ದಾರೆ’ ಎಂದು ದೂರಿದರು.

‘ಈ ವರ್ಷಾಂತ್ಯದಲ್ಲಿ ನಡೆಯಲಿರುವ ರಾಜ್ಯ ವಿಧಾನಸಭೆಯಲ್ಲಿ ಪಕ್ಷವು ಗೆಲುವು ಸಾಧಿಸಲಿದ್ದು, ಅಬಕಾರಿ ಕಾನ್‌ಸ್ಟೆಬಲ್‌ ನೇಮಕಾತಿ ವೇಳೆ ಮೃತಪಟ್ಟ ಅಭ್ಯರ್ಥಿಗಳ ಸಾವಿನ ಕುರಿತಂತೆ ತನಿಖೆ ನಡೆಸಲಿದೆ’ ಎಂದುತಿಳಿಸಿದರು.

ರಸ್ತೆ ಮಾರ್ಗದ ಮೂಲಕ ಪ್ರಯಾಣ: ಪ್ರಧಾನಿ ಅವರು ರಾಂಚಿಯಿಂದ ಜೆಮ್‌ಶೆಡ್‌ಪುರಕ್ಕೆ ಹೆಲಿಕಾಪ್ಟರ್‌ ಮೂಲಕ ತೆರಳಲು ವ್ಯವಸ್ಥೆಯಾಗಿತ್ತು. ಪ್ರತಿಕೂಲ ಹವಾಮಾನದಿಂದ ಹೆಲಿಕಾಪ್ಟರ್‌ ಹಾರಲು ಸಾಧ್ಯವಾಗದ ಕಾರಣ, ರಸ್ತೆಮಾರ್ಗದಲ್ಲಿಯೇ ಅಲ್ಲಿಗೆ ತೆರಳಿದರು.

ಜೆಮ್‌ಶೆಡ್‌ಪುರದಲ್ಲಿ ಭಾನುವಾರ ಬೃಹತ್‌ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ– ಪಿಟಿಐ ಚಿತ್ರ
ಜೆಎಂಎಂ ನೇತೃತ್ವದ ಸರ್ಕಾರವು ಬಿಜೆಪಿ ನಾಯಕರನ್ನು ಗುರಿಯಾಗಿರಿಸಿಕೊಂಡು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸುತ್ತಿದೆ.
–ನರೇಂದ್ರ ಮೋದಿ, ಪ್ರಧಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.