ADVERTISEMENT

ತಿರುಪತಿ ದೇವಸ್ಥಾನಕ್ಕೆ 6 ದಿನ ಪ್ರವೇಶ ಇಲ್ಲ

ಸಣ್ಣ ದುರಸ್ತಿಗಾಗಿ 6 ದಿನ ಭಕ್ತರಿಗೆ ತಿರುಮಲ ದರ್ಶನ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 14 ಜುಲೈ 2018, 19:49 IST
Last Updated 14 ಜುಲೈ 2018, 19:49 IST
   

ಟಿಟಿಡಿ ತಿರುಪತಿ: ವೆಂಕಟೇಶ್ವರ ಸ್ವಾಮಿ ದೇವಾಲಯ ಸಂಕೀರ್ಣಕ್ಕೆ ಆಗಸ್ಟ್‌ 11ರಿಂದ 6 ದಿನಗಳ ಕಾಲ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿದೆ.

ಪುರಾತನ ದೇವಾಲಯದ ಗರ್ಭಗುಡಿಯಲ್ಲಿ ಸಣ್ಣ ಪ್ರಮಾಣದ ದುರಸ್ತಿ ಕೆಲಸಗಳನ್ನು ಕೈಗೊಳ್ಳಲು 'ಅಸ್ಟಬಂಧನ ಬಾಲಲಯ ಮಹಾಸಾಂಪ್ರೋಕ್ಷಣಂ' ಪೂಜೆ ನಡೆಸಲಾಗುತ್ತದೆ. 12 ವರ್ಷಕ್ಕೊಮ್ಮೆ ನಡೆಯುವ ವಿಶೇಷ ಪೂಜೆಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಇದೇ ಮೊದಲ ಬಾರಿಗೆ ವಿಶೇಷ ಪೂಜೆ ಸಂದರ್ಭ ದೇವಾಲಯದ ಸಂಕೀರ್ಣದೊಳಕ್ಕೆ ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗುತ್ತಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ADVERTISEMENT

ತಿರುಮಲ ತಿರುಪತಿ ದೇವಸ್ಥಾನ ಮಂಡಳಿ (ಟಿಟಿಡಿ) ಅಧ್ಯಕ್ಷ ಪುಟ್ಟ ಸುಧಾಕರ ಯಾದವ್ ಅವರು, ತಿರುಪತಿ ಬೆಟ್ಟದ 10 ಕಿಲೋ ಮೀಟರ್‌ ಉದ್ದದ ಮೆಟ್ಟಿಲು ಸಾಲು ಸೇರಿದಂತೆ ದೇವಾಲಯಕ್ಕೆ ಬರುವ ಎಲ್ಲ ಮಾರ್ಗಗಳಲ್ಲಿಯೂ ಭಕ್ತರಿಗೆ ಪ್ರಯಾಣ ನಿರ್ಬಂಧಿಸಲು ನಿರ್ಣಯಿಸಲಾಗಿದೆ ಎಂದು ತಿಳಿಸಿದ್ದಾರೆ.

ಭಕ್ತರು ಈ ಅವಧಿಯಲ್ಲಿ ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು. ಆಗಸ್ಟ್ 17ರಂದು ಮುಂಜಾನೆಯಿಂದಲೇ ಎಂದಿನಂತೆ ದೇವಾಲಯಕ್ಕೆ ಪ್ರವೇಶ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.