ನವಟಿಹಾರಿ (ಉತ್ತರಾಖಂಡ): ಮತಾಂತರಕ್ಕೆ ಒತ್ತಾಯಿಸಿದ ಮತ್ತು ಕಿರುಕುಳ ನೀಡಿದ ಆರೋಪದಡಿ ಕ್ಷೌರಿಕ, ಆತನ ಸಹೋದರ ಹಾಗೂ ಮತ್ತೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
‘ಉತ್ತರಾಖಂಡದ ಕೀರ್ತಿನಗರದಲ್ಲಿ ಘಟನೆ ನಡೆದಿದ್ದು, ಈ ಬಗ್ಗೆ ಬಾಲಕಿಯ ತಾಯಿ ಸೋಮವಾರ ಸಂಜೆ ದಾಖಲಿಸಿದ್ದ ದೂರಿನ ಆಧಾರದಲ್ಲಿ ಮಂಗಳವಾರ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘10ನೇ ತರಗತಿಯಲ್ಲಿ ಓದುತ್ತಿರುವ ನನ್ನ ಮಗಳಿಗೆ ಆರೋಪಿ ಸಲ್ಮಾನ್ ಕಿರುಕುಳ ನೀಡಿದ್ದ ಮತ್ತು ಮತಾಂತರವಾಗುವಂತೆ ಒತ್ತಾಯ ಮಾಡಿದ್ದ. ಅದೇ ದಿನ ರಾತ್ರಿ ನನ್ನ ಮಗಳನ್ನು ಮನೆಯಿಂದ ಹೊರಗೆ ಕರೆಸಿಕೊಂಡಿದ್ದಾನೆ’ ಎಂದು ಬಾಲಕಿಯ ತಾಯಿ ಆರೋಪಿಸಿದ್ದಾರೆ.
‘ದೂರು ದಾಖಲಾದ ಬೆನ್ನಲ್ಲೇ ವಿಶೇಷ ತಂಡ ರಚಿಸಿ, 15 ಗಂಟೆಗಳ ಒಳಗಾಗಿ ಬಾಲಕಿಯನ್ನು ಪತ್ತೆಹಚ್ಚಲಾಯಿತು’ ಎಂದು ಪೊಲೀಸರು ತಿಳಿಸಿದ್ದಾರೆ.
ಅಂಗಡಿಗಳ ಮೇಲೆ ದಾಳಿ:
ಘಟನೆಯ ಬೆನ್ನಲ್ಲೇ ಸ್ಥಳೀಯರು ಕೀರ್ತಿನಗರದಲ್ಲಿರುವ ಮುಸ್ಲೀಮರ ಹಲವು ಅಂಗಡಿಗಳ ಮೇಲೆ ದಾಳಿ ಮಾಡಿ ಧ್ವಂಸಗೊಳಿಸಿದ್ದಾರೆ. ಸ್ಥಳೀಯ ಮಾರುಕಟ್ಟೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.