ADVERTISEMENT

ನ ದೈನ್ಯಂ, ನ ಪಲಾಯನಂ: ಬಸನಗೌಡ ಯತ್ನಾಳ್ ಹೀಗೆ ಹೇಳಿದ್ದೇಕೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ನವೆಂಬರ್ 2023, 14:30 IST
Last Updated 17 ನವೆಂಬರ್ 2023, 14:30 IST
<div class="paragraphs"><p> ಬಸನಗೌಡ ಪಾಟೀಲ ಯತ್ನಾಳ್ </p></div>

ಬಸನಗೌಡ ಪಾಟೀಲ ಯತ್ನಾಳ್

   

ಬೆಂಗಳೂರು: ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ನೇಮಕವಾದ ನಂತರ ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸುತ್ತಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು, ‘ಬದುಕೊಂದು ಮುಗಿಯದ ಸವಾಲು’ ಎಂದಿದ್ದಾರೆ.

ಮೈಕ್ರೊ ಬ್ಲಾಗಿಂಗ್ ಎಕ್ಸ್ ವೇದಿಕೆಯಲ್ಲಿ ಈ ವಿಷಯವನ್ನು ಹಂಚಿಕೊಂಡಿರುವ ಅವರು, ‘ನ ದೈನ್ಯಂ, ನ ಪಲಾಯನಂ. ಯೋಧ ಎಂದಿಗೂ ದೂರಲಾರ ಅಥವಾ ವಿಷಾದ ವ್ಯಕ್ತಪಡಿಸಲಾರ’ ಎಂದಿದ್ದಾರೆ.

ADVERTISEMENT

‘ಯೋಧನ ಬದುಕಿನಲ್ಲಿ ಎದುರಾಗುವ ಯಾವುದೇ ಸವಾಲು ಒಳ್ಳೆಯದು ಅಥವಾ ಕೆಟ್ಟದ್ದು ಆಗಿರಲಾರದು. ಸವಾಲು ಎಂದರೆ ಅದು ಕೇವಲ ಸವಾಲು ಅಷ್ಟೇ’ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಯತ್ನಾಳ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಮಂಡಾಳ್ ವಗ್ಗರಣಿ ಎಂಬುವವರು, ‘ಯತ್ನಾಳ ಸಾಹೇಬ್ರೆ, ಪಕ್ಷದ ನಿರ್ಧಾರಕ್ಕೆ ಬದ್ಧರಾಗಿರಬೇಕು ಅಲ್ವಾ ... ಬಿಜೆಪಿ ಹೈ ಕಮಾಂಡ್ ನಿಮ್ಮ ಮಾತೇ ಯಾಕೆ ಕೇಳಬೇಕು ಎಂದು ವಾದಿಸುವಲ್ಲಿ ನೀವು ವಿಫಲ ಅನ್ನಿಸುತ್ತಿದೆ. ಮೋದಿ , ಅಮಿತ್ ಶಾ, ನಡ್ಡ ಅವರ ತೀರ್ಮಾನಕ್ಕೂ ವಿರೋಧ ಮಾಡಿದರೆ ಹೇಗೆ..ಸ್ವಲ್ಪ ಅಡ್ಜಸ್ಟ್ ಮಾಡ್ಕೊಳಿ’ ಎಂದು ಸಲಹೆ ನೀಡಿದ್ದಾರೆ.

ರಾಕೇಶ್ ಕುಮಾರ್ ಎಂಬುವವರು, ‘ಧೈರ್ಯವಾಗಿರಿ ಗೌಡ್ರೇ ಯಥೋ ಧರ್ಮಃ ಸ್ ತಥೋ ಜಯಃ. ಇಂದಲ್ಲಾ ನಾಳೆ ಖಂಡಿತ ಜಯ ನಿಮ್ಮದೇ’ ಎಂದು ಧೈರ್ಯ ಹೇಳಿದ್ದಾರೆ.

ಸಚಿನ್‌ಡಿಪಿ ಎಂಬುವವರು ಪ್ರತಿಕ್ರಿಯಿಸಿ, ‘ಬಿಟ್ಟ ಹೊರಗ ಬರ್ರಿ, ಒಂದ್ ಮಸ್ತ್ ಪ್ರಾದೇಶಿಕ ಪಾರ್ಟಿ ಕಟ್ಟರಿ. ಎಲ್ಲ ಚಲೋ ಚಲೋ ಮಂದಿನ ಆರ್ಸಿ ತುಗೊರಿ. ಬಿಜೆಪಿ ಎನ್ ಬೆಸ್ಟ್ ಅಲ್ಲಾ. ಕಾಂಗ್ರೆಸ್ ಮುಂದ್ ಸ್ವಲ್ಪ ಚಲೋ ಅಂತ ಮಂದಿ ಅವರ್ ಬೆನ್ನ ಅದಾರ. ಅದಕ್ಕಿಂತ ಚಲೋ ಲೋಕಲ್ ಪಾರ್ಟಿ ಮಾಡ್ರಿ’ ಎಂದೂ ಸಲಹೆಯನ್ನು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.