ADVERTISEMENT

ದೇಶದಲ್ಲಿ ವಕೀಲಿಕೆ ನಡೆಸಲು ವಿದೇಶಿ ವಕೀಲರಿಗೆ ಅನುಮತಿ

ಪಿಟಿಐ
Published 16 ಮಾರ್ಚ್ 2023, 6:33 IST
Last Updated 16 ಮಾರ್ಚ್ 2023, 6:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದಲ್ಲಿ ವಿದೇಶಿ ಕಾನೂನು ಸಂಸ್ಥೆಗಳಿಗೆ, ವಕೀಲರಿಗೆ ವಿದೇಶಿ ಕಾನೂನು, ಅಂತರರಾಷ್ಟ್ರೀಯ ಮಧ್ಯಸ್ಥಿಕೆಯಂತಹ ಸೀಮಿತ ವಲಯದಲ್ಲಿ ವಕೀಲಿಕೆ ನಡೆಸಲು ಭಾರತೀಯ ವಕೀಲರ ಪರಿಷತ್‌ (ಬಾರ್‌ ಕೌನ್ಸಿಲ್‌ ಆಫ್ ಇಂಡಿಯಾ) ಬುಧವಾರ ಅನುಮತಿ ನೀಡಿದೆ.

ಈ ತೀರ್ಮಾನದಿಂದಾಗಿ ಭಾರತ ಹಾಗೂ ವಿದೇಶಗಳಲ್ಲಿನ ವಕೀಲರಿಗೆ ಪರಸ್ಪರ ಪ್ರಯೋಜನ ಆಗಲಿದೆ ಎಂದು ಬಿಸಿಐ ಹೇಳಿದೆ.

ಈ ಉದ್ದೇಶಕ್ಕಾಗಿ ಬಿಸಿಐ, ‘ಬಾರ್‌ ಕೌನ್ಸಿಲ್‌ ಆಫ್‌ ಇಂಡಿಯಾ ರೂಲ್ಸ್‌ ಫಾರ್‌ ರೆಜಿಸ್ಟ್ರೇಷನ್‌ ಆ್ಯಂಡ್‌ ರೆಗ್ಯೂಲೇಷನ್‌ ಆಫ್‌ ಫಾರಿನ್‌ ಲಾಯರ್ಸ್‌ ಆ್ಯಂಡ್‌ ಫಾರಿನ್‌ ಲಾ ಫರ್ಮ್ಸ್‌ ಇನ್‌ ಇಂಡಿಯಾ–2022’ ಎಂಬ ಅಧಿಸೂಚನೆಯನ್ನು ಹೊರಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT