ನವದೆಹಲಿ: ಭಾರತೀಯ ಸೇನೆಯನ್ನು ಮೋದಿ ಸೇನೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ತಾಕೀತು ನೀಡಿದ ಚುನಾವಣಾ ಆಯೋಗವು ಇನ್ನು ಮುಂದೆ ಎಚ್ಚರಿಕೆಯಿಂದಿರಿ ಎಂದು ಹೇಳಿದೆ.
ಕಳೆದಭಾನುವಾರ ಗಾಜಿಯಾಬಾದ್‌ನಲ್ಲಿ ನಡೆದ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, ಕಾಂಗ್ರೆಸ್‍ನವರು ಭಯೋತ್ಪಾದಕರಿಗೆ ಬಿರಿಯಾನಿ ನೀಡಿದರು. ಆದರೆ ಮೋದಿ ಜೀ ಕೀ ಸೇನಾ (ಮೋದಿಯವರ ಸೇನೆ) ಅವರಿಗೆ ಗುಂಡು ಮತ್ತು ಬಾಂಬ್ ನೀಡಿದರು. ವ್ಯತ್ಯಾಸ ಇರುವುದು ಇಷ್ಟೇ ಎಂದಿದ್ದರು.
‘ಕಾಂಗ್ರೆಸ್‌ಗೆ ಯಾವುದು ಅಸಾಧ್ಯ ಎನಿಸಿತ್ತೋ, ಮೋದಿ ಅವರಿಂದ ಅದು ಸಾಧ್ಯವಾಗಿದೆ. ಏಕೆಂದರೆ ಮೋದಿ ಅವರು ಇದ್ದರೆ, ಅಸಾಧ್ಯವೆನಿಸಿದ್ದೂ ಸಾಧ್ಯವಾಗಿಬಿಡುತ್ತದೆ’ ‘ಮೋದಿ ಅವರ ನಾಯಕತ್ವದಲ್ಲಿ ಉಗ್ರರ ಶಿಬಿರಗಳನ್ನು ಧ್ವಂಸ ಮಾಡಲಾಯಿತು. ಬಾಲಾಕೋಟ್ ದಾಳಿಯ ಬಳಿಕ ಪಾಕಿಸ್ತಾನವು ಉಗ್ರರ ಹೆಣ ಎಣಿಸುತ್ತಿದೆ. ಇದೇ ವೇಳೆ ನಮ್ಮ ಪ್ರತಿಪಕ್ಷಗಳು ಸಾಕ್ಷ್ಯ ಕೇಳುತ್ತಿವೆ’ ಎಂದು ಯೋಗಿ ಆಕ್ರೋಶ ವ್ಯಕ್ತ ಪಡಿಸಿದ್ದರು.
ಇದನ್ನೂ ಓದಿ
*ಭಾರತೀಯ ಸೇನೆಯನ್ನು 'ಮೋದಿಯವರ ಸೇನೆ' ಎಂದ ಯೋಗಿ ಆದಿತ್ಯನಾಥ
*ಭಾರತೀಯ ಸೇನೆಯನ್ನು 'ಮೋದಿ ಸೇನೆ' ಎನ್ನುವವರು ದೇಶದ್ರೋಹಿಗಳು: ವಿ.ಕೆ.ಸಿಂಗ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.