ಶಿಮ್ಲಾ: ಹಿಮಾಚಲ ಪ್ರದೇಶದ ಶಿಮ್ಲಾದ ಬಿರ್–ಬಿಲ್ಲಿಂಗ್ನಲ್ಲಿ ಪ್ಯಾರಾಗ್ಲೈಡಿಂಗ್ ಮಾಡುತ್ತಿದ್ದ ಇಬ್ಬರು ಪ್ಯಾರಾಗ್ಲೈಡರ್ಗಳು ಪರಸ್ಪರ ಡಿಕ್ಕಿಯಾದ ಪರಿಣಾಮ ಬೆಲ್ಜಿಯಂನ ಪ್ಯಾರಾಗ್ಲೈಡರ್ ಒಬ್ಬರು ಮೃತಪಟ್ಟಿದ್ದಾರೆ.
ಮುಂಬರುವ ಪ್ಯಾರಾಗ್ಲೈಡಿಂಗ್ ವಿಶ್ವಕಪ್-2024ರ ಸ್ಪರ್ಧೆಗಾಗಿ ಅಭ್ಯಾಸ ನಡೆಸುತ್ತಿದ್ದ ವೇಳೆ ಗಾಳಿಯಲ್ಲಿ ಇಬ್ಬರು ಪ್ಯಾರಾಗ್ಲೈಡರ್ಗಳು ಡಿಕ್ಕಿಯಾಗಿದ್ದಾರೆ. ಈ ವೇಳೆ ಫೆಯಾರೆಟ್ಸ್ ಎಂಬ ಪ್ಯಾರಾಗ್ಲೈಡರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೊಬ್ಬ ಪ್ಯಾರಾಗ್ಲೈಡರ್ ಕೆಳಗೆ ಬೀಳುವಾಗ ಮರದಲ್ಲಿ ಸಿಲುಕಿಕೊಂಡಿದ್ದರು. ಗಾಯಗೊಂಡಿರುವ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ರಾಷ್ಟ್ರೀಯತೆ ಈವರೆಗೆ ತಿಳಿದುಬಂದಿಲ್ಲ ಎಂದು ಪೊಲೀಸರು ಬುಧವಾರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.