ADVERTISEMENT

ಪಶ್ಚಿಮ ಬಂಗಾಳದ ಸಂಪುಟ ಪುನರ್‌ರಚನೆ: 9 ನೂತನ ಸಚಿವರ ಪ್ರಮಾಣವಚನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಆಗಸ್ಟ್ 2022, 12:31 IST
Last Updated 3 ಆಗಸ್ಟ್ 2022, 12:31 IST
 ಬಾಬುಲ್ ಸುಪ್ರಿಯೊ: ಪಿಟಿಐ ಚಿತ್ರ
ಬಾಬುಲ್ ಸುಪ್ರಿಯೊ: ಪಿಟಿಐ ಚಿತ್ರ   

ಕೋಲ್ಕತ್ತ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಸಂಪುಟದ ಪುನರ್‌ರಚನೆ ಮಾಡಿದ್ದು, ಬಾಬುಲ್ ಸುಪ್ರಿಯೊ ಸೇರಿದಂತೆ 9 ಶಾಸಕರು, ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಬಾಬುಲ್ ಜೊತೆಗೆ ಸ್ನೇಹಾಸಿಸ್ ಚಕ್ರವರ್ತಿ, ಪಾರ್ಥ ಭೌಮಿಕ್, ಉದಯನ್ ಗುಹಾ, ಪ್ರದೀಪ್ ಮೊಜುಂದಾರ್ ಅವರು ಕ್ಯಾಬಿನೆಟ್ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಲಾ ಗಣೇಶನ್ ನೂತನ ಸಚಿವರಿಗೆ ಪ್ರತಿಜ್ಞಾವಿಧಿ ಭೋದಿಸಿದರು.

ADVERTISEMENT

ಬುಡಕಟ್ಟು ನಾಯಕಿ ಬಿರ್ಬಹಾ ಹಂಸದಾ, ಬಿಪ್ಲವ್ ರಾಯ್ ಚೌಧರಿ ಸ್ವತಂತ್ರ ಖಾತೆ ರಾಜ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ಉಳಿದಂತೆ, ತಜಮುಲ್ ಹೊಸೈನ್ ಮತ್ತು ಸತ್ಯಜಿತ್ ಬರ್ಮನ್ ಅವರು ರಾಜ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ಶಿಕ್ಷಕರ ನೇಮಕಾತಿ ಹಗರಣದ ಬಳಿಕ ಸರ್ಕಾರದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ, ಆರೋಪಿ ಪಾರ್ಥ ಚಟರ್ಜಿ ಅವರನ್ನು ಸಂಪುಟದಿಂದ ಕೈಬಿಡಲಾಗಿದೆ. ಕೈಗಾರಿಕೆ, ವಾಣಿಜ್ಯ ಮತ್ತು ಉದ್ಯಮಗಳು, ಮಾಹಿತಿ ತಂತ್ರಜ್ಞಾನ ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸೇರಿದಂತೆ ನಾಲ್ಕು ಪ್ರಮುಖ ಇಲಾಖೆಗಳ ಉಸ್ತುವಾರಿ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.