ADVERTISEMENT

MGNREGA ಕುರಿತು ಚರ್ಚೆ..ಟಿಎಂಸಿ ನಾಯಕರನ್ನು ಭೇಟಿ ಮಾಡಲಿರುವ ಬಂಗಾಳ ರಾಜ್ಯಪಾಲರು

ಮಹತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಬಾಕಿ ಪಾವತಿ ಬಗ್ಗೆ ಚರ್ಚಿಸಲು ಬಂಗಾಳ ರಾಜ್ಯಪಾಲರು ಇಂದು ಸಂಜೆ 4 ಗಂಟೆಗೆ ಟಿಎಂಸಿ ನಾಯಕರನ್ನು ಭೇಟಿ ‌ಮಾಡಲಿದ್ದಾರೆ.

ಪಿಟಿಐ
Published 9 ಅಕ್ಟೋಬರ್ 2023, 8:44 IST
Last Updated 9 ಅಕ್ಟೋಬರ್ 2023, 8:44 IST
<div class="paragraphs"><p>ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ ಆನಂದ ಬೋಸ್</p></div>

ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ ಆನಂದ ಬೋಸ್

   

(ಫೋಟೋ ಕೃಪೆ–ಪಿಟಿಐ)

ಕಲ್ಕತ್ತ (ಪಶ್ಚಿಮ ಬಂಗಾಳ): ರಾಜಭವನದ ಹೊರಗೆ ಟಿಎಂಸಿ ನಾಯಕರು ನಡೆಸುತ್ತಿರುವ ಪ್ರತಿಭಟನೆಯ ನಡುವೆ ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ ಆನಂದ ಬೋಸ್ ಇಂದು (ಸೋಮವಾರ) ಸಂಜೆ 4 ಗಂಟೆಗೆ ರಾಜಭವನದಲ್ಲಿ ತೃಣಮೂಲ ಕಾಂಗ್ರೆಸ್ ನಾಯಕರನ್ನು ಭೇಟಿಯಾಗಲಿದ್ದಾರೆ.

ADVERTISEMENT

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂಜಿಎನ್‌ಆರ್‌ಇಜಿಎ) ಬಾಕಿ ಪಾವತಿ ಮತ್ತು ಬಡ ಕುಟುಂಬಗಳಿಗೆ ವಸತಿ ಯೋಜನೆಗಳ ವಿಳಂಬ ಸಮಸ್ಯೆ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ಅಧಿಕೃತ ಮೂಲಗಳು ಪಿಟಿಐಗೆ ತಿಳಿಸಿವೆ.

'ರಾಜಭವನ ಎಂದರೆ ಜನರ ಭವನ. ಬೆಳಗ್ಗೆ 4 ರಿಂದ ರಾತ್ರಿ 11 ರವರೆಗೆ ಯಾವುದೇ ಪಕ್ಷದ ನಾಯಕರಿಗೆ ಸ್ವಾಗತ. ರಾತ್ರಿ 11 ಗಂಟೆಯವರೆಗೆ ನನ್ನನ್ನು ಭೇಟಿಯಾಗಲು ಬಯಸುವವರನ್ನು ನಾನು ಖಂಡಿತವಾಗಿಯೂ ಭೇಟಿಯಾಗುತ್ತೇನೆ' ಎಂದು ಬೋಸ್ ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ರಾಜ್ಯದಲ್ಲಿ ಎಂಜಿಎನ್‌ಆರ್‌ಇಜಿಎ ಕೆಲಸದಿಂದ ವಂಚಿತರಾದವರನ್ನು ಭೇಟಿ ಮಾಡಿ ಅವರ ಕುಂದುಕೊರತೆಗಳನ್ನು ಆಲಿಸಲಾಗುವುದು ಎಂದು ಬೋಸ್ ನಿನ್ನೆ ಹೇಳಿದ್ದರು. ಆದರೆ ಅವರು ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರನ್ನು ಭೇಟಿ ಮಾಡುತ್ತಾರೆಯೇ? ಎಂಬ ಬಗ್ಗೆ ಯಾವುದೇ ಸ್ಪಷ್ಟತೆಯಿಲ್ಲ.

ಉತ್ತರ ಬಂಗಾಳದ ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸಿದ ನಂತರ ಡಾರ್ಜಿಲಿಂಗ್‌ನಿಂದ ಕಲ್ಕತ್ತಕ್ಕೆ ಹಿಂದಿರುಗಿದ ಬೋಸ್, ರಾಜಭವನದ ಹೊರಗೆ ಟಿಎಂಸಿಯ ನಡೆಯುತ್ತಿರುವ ಧರಣಿಗೆ ಅನುಮತಿ ನೀಡಲಾಗಿದೆಯೇ ಎಂದು ವಿಚಾರಿಸಿ ಮುಖ್ಯ ಕಾರ್ಯದರ್ಶಿ ಹೆಚ್‌.ಕೆ ದ್ವಿವೇದಿ ಅವರಿಗೆ ಪತ್ರ ಬರೆದಿದ್ದಾರೆ ಎಂದು ರಾಜ್ಯಪಾಲರ ಭವನದ ಮೂಲಗಳು ತಿಳಿಸಿವೆ.

ಹಿರಿಯ ನಾಯಕ ಅಭಿಷೇಕ್ ಬ್ಯಾನರ್ಜಿ ನೇತೃತ್ವದ ಟಿಎಂಸಿ ಕಾರ್ಯಕರ್ತರು ರಾಜಭವನದ ಹೊರಗೆ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಭಾನುವಾರ(ನಿನ್ನೆ) 4ನೇ ದಿನಕ್ಕೆ ಕಾಲಿಟ್ಟಿತ್ತು. ಬೋಸ್‌ ಅವರನ್ನು ಭೇಟಿಯಾಗುವವರೆಗೂ ತಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಪ್ರತಿಭಟನಾ ನಿರತರು ಎಚ್ಚರಿಸಿದ್ದರು.

ಕೇಂದ್ರ ಸರ್ಕಾರದ ನಿರ್ದೇಶನಗಳನ್ನು ರಾಜ್ಯ ಪಾಲಿಸದ ಕಾರಣ ಎಂಜಿಎನ್‌ಆರ್‌ಇಜಿಎ ಸೆಕ್ಷನ್ 27ರ ಪ್ರಕಾರ ಮಾರ್ಚ್ 9, 2022 ರಿಂದ ಪಶ್ಚಿಮ ಬಂಗಾಳಕ್ಕೆ ಹಣ ಬಿಡುಗಡೆಯನ್ನು ನಿಲ್ಲಿಸಲಾಗಿದೆ ಎಂದು ಅಕ್ಟೋಬರ್ 5 ರಂದು ಗ್ರಾಮೀಣಾಭಿವೃದ್ಧಿ ಸಚಿವಾಲಯ ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.