ADVERTISEMENT

ಕಾಲೇಜು ಅರ್ಜಿಯಲ್ಲಿ ವಿದ್ಯಾರ್ಥಿಯ ಧರ್ಮ 'ಮಾನವೀಯತೆ' ಎಂದು ಆಯ್ಕೆ ಮಾಡಬಹುದು!

​ಪ್ರಜಾವಾಣಿ ವಾರ್ತೆ
Published 31 ಮೇ 2019, 10:04 IST
Last Updated 31 ಮೇ 2019, 10:04 IST
   

ಕೊಲ್ಕತ್ತ: ಸರ್ಕಾರಿ ಕೆಲಸಕ್ಕಾಗಿರುವ ಅರ್ಜಿ, ಬ್ಯಾಂಕ್ ಅಥವಾ ಕಾಲೇಜು ಪ್ರವೇಶ ಅರ್ಜಿಗಳಲ್ಲಿ ಧರ್ಮ (Religion) ಯಾವುದು? ಎಂಬ ಪ್ರಶ್ನೆ ಇದ್ದೇ ಇರುತ್ತದೆ. ಆದರೆ ಕೊಲ್ಕತ್ತದ ಕಾಲೇಜೊಂದರಲ್ಲಿ ಈ ಪ್ರಶ್ನೆಗಿರುವ ಉತ್ತರದ ಆಯ್ಕೆಯಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಮೊದಲಾದ ಧರ್ಮದ ಜತೆಗೆ ಮಾನವೀಯತೆ (Humanity) ಎಂಬ ಆಯ್ಕೆಯೂ ಇದೆ.

ಕೊಲ್ಕತ್ತದ ಬೆಥೂನ್ ಕಾಲೇಜ್‌ ಪ್ರವೇಶ ಅರ್ಜಿಯಲ್ಲಿ ಈ ರೀತಿ ಧರ್ಮ ನಮೂದಿಸಲಿರುವ ಕಾಲಂನಲ್ಲಿ ಮಾನವೀಯತೆ ಎಂಬ ಆಯ್ಕೆ ನೀಡಿ ಗಮನ ಸೆಳೆದಿದೆ.

2019ರ ಸಾಲಿನ ಪದವಿಪೂರ್ವ ಶಿಕ್ಷಣಕ್ಕೆ ಮೇ. 27ರಂದು ಅರ್ಜಿ ಸ್ವೀಕರಿಸಲು ಆರಂಭವಾಗಿದ್ದು, ಈ ಬಾರಿ ಹೊಸ ಆಯ್ಕೆಯನ್ನು ಸೇರಿಸಲಾಗಿದೆ.ಆನ್‌ಲೈನಲ್ಲಿಯೂ ಅರ್ಜಿ ಲಭ್ಯವಿದೆ.

ಪ್ರವೇಶ ಅರ್ಜಿಯಲ್ಲಿ ಧರ್ಮದ ಹೆಸರನ್ನು ನಮೂದಿಸುವುದಕ್ಕೆ ಕೆಲವು ವಿದ್ಯಾರ್ಥಿಗಳು ಇಷ್ಟಪಡುವುದಿಲ್ಲ. ಅವರ ನಿಲುವುಗಳನ್ನು ನಾವು ಗೌರವಿಸುತ್ತೇವೆ.ಹಾಗಾಗಿ ಮಾನವೀಯತೆಯೇ ಧರ್ಮ ಎಂಬುದಾಗಿ ನಮೂದಿಸುವ ಅವಕಾಶವನ್ನು ಇಲ್ಲಿ ನೀಡಲಾಗಿದೆ.ಈ ರೀತಿಯ ಆಯ್ಕೆಯನ್ನು ಅರ್ಜಿಯಲ್ಲಿ ಸೇರಿಸುವುದಕ್ಕೆಆಡಳಿತ ಮಂಡಳಿ ಒಕ್ಕೊರಲಿನಿಂದ ಸಮ್ಮತಿಸಿತ್ತು ಎಂದು ಬೆಥೂನ್ ಕಾಲೇಜಿನ ಪ್ರಾಂಶುಪಾಲೆ ಮಮತಾ ರೇ ಹೇಳಿರುವುದಾಗಿ ದಿ ಮಿಲೇನಿಯಂ ಪೋಸ್ಟ್ ವರದಿ ಮಾಡಿದೆ.

ADVERTISEMENT

1879ರಲ್ಲಿ ಆರಂಭವಾದ ಬೆಥೂನ್ ಕಾಲೇಜು ಈ ಹಿಂದೆ ಹಿಂದೂ ಫೀಮೇಲ್ ಸ್ಕೂಲ್ ಎಂದು ಕರೆಯಲ್ಪಡುತ್ತಿತ್ತು. NAAC-Grade A ಅರ್ಹತೆ ಪಡೆದ ಮೊದಲ ಮಹಿಳಾ ಕಾಲೇಜುಇದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.