ಗ್ಯಾಂಗ್ಟಕ್ (ಪಿಟಿಐ): ಖ್ಯಾತ ಫುಟ್‌ಬಾಲ್ ಆಟಗಾರ ಬೈಚುಂಗ್ ಭುಟಿಯಾ ಅವರನ್ನು ಹಮ್‌ರೋ ಸಿಕ್ಕಿಂ ಪಕ್ಷದ (ಎಚ್‌ಎಸ್‌ಪಿ) ಅಧ್ಯಕ್ಷರನ್ನಾಗಿ ಮಂಗಳವಾರ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
‘ಪಕ್ಷದ ನಾಯಕರು ಮತ್ತು ಸದಸ್ಯರು ಸೇರಿ ಪಕ್ಷದ ರಾಷ್ಟ್ರೀಯ ಸಮ್ಮೇಳನದಲ್ಲಿ ಭುಟಿಯಾ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಭೈರಾಜ್ ಅಧಿಕಾರಿ ಹೇಳಿದರು.
‘ರಾಜ್ಯದಲ್ಲಿರುವ ಭ್ರಷ್ಟ ಮತ್ತು ದುರಾಡಳಿತ ಸರ್ಕಾರದ ವಿರುದ್ಧ ಭುಟಿಯಾ ಅವರು ಸಮರ್ಥ ಪ್ರತಿರೋಧ ಒಡ್ಡಲಿದ್ದಾರೆ. ಜೊತೆಗೆ, ಈ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಿ, ಪಾರದರ್ಶಕ ಮತ್ತು ಜನರ ಕಷ್ಟಗಳಿಗೆ ಸ್ಪಂದಿಸುವ ನಮ್ಮ ಪಕ್ಷದ ಸರ್ಕಾರವನ್ನು ರಚಿಸಲಿದ್ದಾರೆ ಎನ್ನುವ ವಿಶ್ವಾಸ ಪಕ್ಷಕ್ಕಿದೆ’ ಎಂದರು.
‘ಸಿಕ್ಕಿಂ ಜನರ ಆಶೋತ್ತರ ಹಾಗೂ ಭರವಸೆಗಳಿಗೆ ಅನುಗುಣವಾಗಿ ಕೆಲಸ ಮಾಡುವೆ’ ಎಂದು ಭುಟಿಯಾ ಹೇಳಿದರು.
ಭುಟಿಯಾ ಅವರು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದಿಂದ 2014ರಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಟಿಎಂಸಿಯಿಂದ ಹೊರಬಂದ ಅವರು ಹಮ್‌ರೋ ಸಿಕ್ಕಿಂ ಪಕ್ಷವನ್ನು 2018ರಲ್ಲಿ ಸ್ಥಾಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.