ನವದೆಹಲಿ: ಕೇಂದ್ರ ಸರ್ಕಾರದ ಮೂರುಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ʼಭಾರತ್ ಬಂದ್ʼ ಪಂಜಾಬ್‌ಮತ್ತು ಹರಿಯಾಣದ ಜನಜೀವನದ ಮೇಲೆ ಪರಿಣಾಮವನ್ನುಂಟು ಮಾಡಿದೆ. ಸಾಮಾನ್ಯ ರಸ್ತೆಗಳುಮಾತ್ರವಲ್ಲದೆ ಹೆದ್ದಾರಿಗಳನ್ನೂತಡೆದು ಪ್ರತಿಭಟಿಸುತ್ತಿರುವ ರೈತರು, ಎರಡೂ ರಾಜ್ಯಗಳಹಲವೆಡೆ ರೈಲ್ವೆ ಹಳಿಗಳ ಮೇಲೂಪ್ರತಿಭಟನೆ ಆರಂಭಿಸಿದ್ದಾರೆ.
ಪಂಜಾಬ್‌ನಲ್ಲಿ ಆಡಳಿತ ಪಕ್ಷ ಕಾಂಗ್ರೆಸ್, ರೈತ ಸಂಘಟನೆಗಳಿಗೆ ಬೆಂಬಲ ಸೂಚಿಸಿದೆ. ಇಲ್ಲಿಸಾರಿಗೆ ವ್ಯವಸ್ಥೆ ಸಂಪೂರ್ಣ ಸ್ಥಗಿತವಾಗಿದ್ದು, ಹಲವುಭಾಗಗಳಲ್ಲಿ ಮಳಿಗೆಗಳು ಮತ್ತು ವಾಣಿಜ್ಯ ಕೇಂದ್ರಗಳು ಮುಚ್ಚಲ್ಪಟ್ಟಿವೆ.
ಅಮೃತಸರ, ರೂಪನಗರ್, ಜಲಂಧರ್, ಪಠಾಣ್‌ಕೋಟ್, ಸಾಂಗ್ರೂರ್, ಮೊಹಾಲಿ, ಲೂಧಿಯಾನ, ಫಿರೋಜ್‌ಪುರ,ಬಥಿಂದಾ ಸೇರಿದಂತೆಹಲವು ಜಿಲ್ಲೆಗಳಲ್ಲಿರಾಷ್ಟ್ರೀಯ ಮತ್ತು ರಾಜ್ಯಹೆದ್ದಾರಿಗಳನ್ನು ಪ್ರತಿಭಟನಾಕಾರರು ಬಂದ್ ಮಾಡಿದ್ದಾರೆ.
ನೆರೆಯ ಹರಿಯಾಣದಲ್ಲಿಯೂ ಸಿರ್ಸಾ, ಫತೆಹಬಾದ್, ಕುರುಕ್ಷೇತ್ರ, ಪಾಣಿಪತ್, ಹಿಸಾರ್, ಛಖ್ರಿ ದಾದ್ರಿ, ಕರ್ನಾಲ್, ಕೈಥಾಲ್, ರೋಹ್ಟಕ್, ಜಝ್ಝಾರ್ ಮತ್ತು ಪಂಚಕುಲ ಜಿಲ್ಲೆಗಳಲ್ಲಿರುವ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಸಂಚಾರವನ್ನು ಪ್ರತಿಭಟನಾಕಾರರು ತಡೆದಿದ್ದಾರೆ.
ಪಿರೋಜ್‌ಪುರ ವಿಭಾಗೀಯರೈಲ್ವೆವ್ಯವಸ್ಥಾಪಕಿಸೀಮಾ ಶರ್ಮಾ, ಹಲವು ಪ್ರಯಾಣಿಕರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದ್ದು, ಇನ್ನೂ ಕೆಲ ರೈಲುಗಳ ಸಂಚಾರಕ್ಕೆ ಸಮಯ ಮರುನಿಗದಿಗೊಳಿಸಲಾಗಿದೆ.
ಪ್ರತಿಭಟನಾಕಾರರು ರೈಲ್ವೆ ಹಳಿಗಳ ಮೇಲೆ ಕುಳಿತಿರುವುದರಿಂದ, ಸಾಧ್ಯವಾದಷ್ಟು ರೈಲುಗಳನ್ನು ನಿಲ್ದಾಣದಲ್ಲೇ ನಿಲ್ಲಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಇದರಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಪ್ರಯಾಣಿಕರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದಿದ್ದಾರೆ.
ಕುರುಕ್ಷೇತ್ರ, ಸೋನಿಪತ್, ಬಹದ್ದೂರ್‌ಗಡ,ಛಖ್ರಿ ದಾದ್ರಿ, ಜಿಂದ್, ಅಮೃತಸರ, ಪಟಿಯಾಲ, ಬರ್ನಾಲ, ದೆರಾಬಸ್ಸಿ ಸೇರಿದಂತೆ ಎರಡೂ ರಾಜ್ಯಗಳ ಹಲವೆಡೆ ರೈಲು ಹಳಿಗಳ ಮೇಲೆ ಕುಳಿತು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ ಹಲವು ರೈಲುಗಳ ಸಂಚಾರಕ್ಕೆ ತೊಂದರೆಯಾಗಿದೆ.
ಪ್ರತಿಭಟನೆಗೆ ಬೆಂಬಲ ಸೂಚಿಸಿರುವ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ, ಕೇಂದ್ರ ಸರ್ಕಾರವು ʼರೈತ ವಿರೋಧಿʼ ಮೂರು ಕಾಯ್ದೆಗಳನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ʼನಾನು ರೈತರ ಪರ ನಿಲ್ಲುತ್ತೇನೆ ಮತ್ತು ಕೇಂದ್ರ ಸರ್ಕಾರವು ʼರೈತ ವಿರೋಧಿʼ ಮೂರು ಕಾಯ್ದೆಗಳನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸುತ್ತೇನೆ. ನಮ್ಮ ರೈತರು ಅವರ ಹಕ್ಕುಗಳಿಗಾಗಿ ವರ್ಷಕ್ಕೂ ಹೆಚ್ಚು ಸಮಯದಿಂದ ಹೋರಾಟ ನಡೆಸುತ್ತಿದ್ದಾರೆ. ಅವರ ಧ್ವನಿಯನ್ನು ಕೇಳಿಸಿಕೊಳ್ಳಬೇಕಾದ ಸಮಯ ಬಂದಿದೆ. ರೈತರು ಶಾಂತಿಯುವಾಗಿ ಧ್ವನಿ ಎತ್ತುವಂತೆ ವಿನಂತಿಸುತ್ತೇನೆʼ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಇವನ್ನೂ ಓದಿ
*ಭಾರತ ಬಂದ್: ರಾಜ್ಯದೆಲ್ಲೆಡೆ ರೈತರ ಪ್ರತಿಭಟನೆ, ಬಂದ್ಗೆ ಮಿಶ್ರ ಪ್ರತಿಕ್ರಿಯೆ Live
*ದೆಹಲಿಯಲ್ಲಿ ಬಂದ್ ನೀರಸ: ಎಂದಿನಂತೆ ಆಟೊ,ಟ್ಯಾಕ್ಸಿ ಸಂಚಾರ, ವ್ಯಾಪಾರ ಚಟುವಟಿಕೆ
*ಭಾರತ್ ಬಂದ್: ರಾಜಧಾನಿಯಲ್ಲಿ ಪ್ರತಿಭಟನಾ ಮೆರವಣಿಗೆ ಆರಂಭ- ಬಿಗಿ ಭದ್ರತೆ
*ಭಾರತ ಬಂದ್; ಬೆಂಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ
*ಶಾಂತಿಯುತ ಸತ್ಯಾಗ್ರಹ ಸರ್ಕಾರಕ್ಕೆ ಇಷ್ಟವಾಗಿಲ್ಲ; ಅದಕ್ಕಾಗಿ ಭಾರತ್ ಬಂದ್-ರಾಹುಲ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.