ಮುಂಬೈ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಸೋಮವಾರ ನಡೆಸುತ್ತಿರುವ ʼಭಾರತ್ ಬಂದ್ʼನಿಂದಾಗಿ ಮುಂಬೈನಲ್ಲಿ ಯಾವುದೇ ರೀತಿಯ ಪರಿಣಾಮಗಳಾಗಿಲ್ಲ. ವಾಣಿಜ್ಯಕೇಂದ್ರಗಳು ಮತ್ತು ಸ್ಥಳೀಯ ಸಾರಿಗೆವಾಹನಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ʼಅಂಧೇರಿ, ಜೋಗೇಶ್ವರಿ ಸೇರಿದಂತೆ ಹಲವು ಕಡೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರುಫಲಕಗಳನ್ನು ಹಿಡಿದು, ಕೃಷಿ ಕಾಯ್ದೆಗಳ ವಿರುದ್ಧ ಘೋಷಣೆ ಕೂಗಿದರು. ಅದರ ಹೊರತಾಗಿ ಬೇರಾವಪರಿಣಾಮಗಳಾಗಿಲ್ಲʼ
ʼಈವರೆಗೆ ನಗರದ ಪ್ರಮುಖ ಜಂಕ್ಷನ್‌ಗಳು ಮತ್ತು ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನೂ ಹಾಕಿಲ್ಲ. ಹೊರಗಿನಿಂದ ಹೆಚ್ಚಿನ ರಕ್ಷಣಾ ಪಡೆಯನ್ನೂನಿಯೋಜಿಸಿಲ್ಲ. ಆದರೆ, ಪರಿಸ್ಥಿತಿ ಮತ್ತು ರಾಜಕೀಯ ಪ್ರಕ್ಷಗಳ ಮುಂದಿನ ನಡೆಯನ್ನು ಅನುಸರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದುʼ ಎಂದು ಅಧಿಕಾರಿಗಳು ಹೇಳಿದ್ದಾರೆ.
ನಗರದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ಅಥವಾಅಹಿತಕರ ಘಟನೆಗಳು ಇಲ್ಲಿಯವರೆಗೆ ವರದಿಯಾಗಿಲ್ಲ. ಮಳಿಗೆಗಳು ಮತ್ತು ಇತರ ವಾಣಿಜ್ಯ ಕೇಂದ್ರಗಳು ಎಂದಿನಂತೆ ತೆರೆದಿವೆ. ಸಾರಿಗೆ ಸಂಚಾರವೂ ಸಾಮಾನ್ಯವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ವಿವಾದಕ್ಕೆ ಸಂಬಂಧಿಸಿದಂತೆಕೇಂದ್ರ ಸರ್ಕಾರವು ರೈತ ನಾಯಕರೊಂದಿಗೆ11 ಸುತ್ತಿನಮಾತುಕತೆ ನಡೆಸಿದೆ. ಆದಾಗ್ಯೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಈ ವರ್ಷದ ಜನವರಿ22ರಂದು ಕೊನೆಯ ಸಲ ಮಾತುಕತೆ ನಡೆದಿತ್ತು. ಅದರೆ, ಗಣರಾಜ್ಯೋತ್ಸವದಂದು (ಜನವರಿ26) ರೈತರು ಆಯೋಜಿಸಿದ್ದ ಟ್ರ್ಯಾಕ್ಟರ್ ರ‍್ಯಾಲಿ ಸಂದರ್ಭ ನಡೆದ ಗಲಭೆ ಬಳಿಕ ಮತ್ತೆ ಮಾತುಕತೆ ಜರುಗಿಲ್ಲ.
ಕೃಷಿ ಕಾಯ್ದೆಗಳು ಮಾರುಕಟ್ಟೆ ವ್ಯವಸ್ಥೆ ಮತ್ತು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ವ್ಯವಸ್ಥೆಗೆ ಹಾನಿ ಮಾಡಲಿವೆ ಎಂಬುದು ಪ್ರತಿಭಟನಾನಿರತ ರೈತರ ಆತಂಕವಾಗಿದೆ. ಇದನ್ನು ಅಲ್ಲಗಳೆಯುತ್ತಿರುವ ಕೇಂದ್ರ ಸರ್ಕಾರ, ರೈತರ ಆದಾಯವನ್ನು ದುಪ್ಪಟ್ಟಾಗಿಸಲು ಕಾಯ್ದೆಗಳು ನೆರವಾಗಲಿವೆ ಎಂದು ತನ್ನ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಾ ಬಂದಿದೆ.
ಇವನ್ನೂ ಓದಿ
*ಭಾರತ ಬಂದ್: ರಾಜ್ಯದೆಲ್ಲೆಡೆ ರೈತರ ಪ್ರತಿಭಟನೆ, ಬಂದ್ಗೆ ಮಿಶ್ರ ಪ್ರತಿಕ್ರಿಯೆ Live
*ದೆಹಲಿಯಲ್ಲಿ ಬಂದ್ ನೀರಸ: ಎಂದಿನಂತೆ ಆಟೊ,ಟ್ಯಾಕ್ಸಿ ಸಂಚಾರ, ವ್ಯಾಪಾರ ಚಟುವಟಿಕೆ
*ಭಾರತ್ ಬಂದ್: ರಾಜಧಾನಿಯಲ್ಲಿ ಪ್ರತಿಭಟನಾ ಮೆರವಣಿಗೆ ಆರಂಭ- ಬಿಗಿ ಭದ್ರತೆ
*ಭಾರತ ಬಂದ್; ಬೆಂಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ
*ಶಾಂತಿಯುತ ಸತ್ಯಾಗ್ರಹ ಸರ್ಕಾರಕ್ಕೆ ಇಷ್ಟವಾಗಿಲ್ಲ; ಅದಕ್ಕಾಗಿ ಭಾರತ್ ಬಂದ್-ರಾಹುಲ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.