ADVERTISEMENT

ಕೋವಿನ್ ಪೋರ್ಟಲ್‌ಗೆ ಇನ್‌ಕೋವ್ಯಾಕ್‌: ಭಾರತ್ ಬಯೋಟೆಕ್ ಮನವಿ

ಪಿಟಿಐ
Published 11 ಡಿಸೆಂಬರ್ 2022, 15:49 IST
Last Updated 11 ಡಿಸೆಂಬರ್ 2022, 15:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೈದರಾಬಾದ್:ಭಾರತ್ ಬಯೋಟೆಕ್ ಕೋವಿಡ್ 19 ವಿರುದ್ಧ ಮೂಗಿನ ಮೂಲಕ ಹಾಕುವ ಲಸಿಕೆ ಇನ್‌ಕೋವ್ಯಾಕ್‌ (ಇಂಟ್ರಾನಾಸಲ್) ಅನ್ನು ಕೋವಿನ್‌ ಪೋರ್ಟಲ್‌ನಲ್ಲಿ ಸೇರಿಸುವಂತೆಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.

ಇದು ಲಸಿಕೆ ಹಾಕಿಸಿಕೊಂಡವರಿಗೆ ಪ್ರಮಾಣಪತ್ರ ಪಡೆಯಲು ಅನುವು ಮಾಡಿಕೊಡುತ್ತದೆ.ಜಾಗತಿಕವಾಗಿ ಇಂಟ್ರಾನಾಸಲ್ ಲಸಿಕೆ ತಯಾರಿಕೆ ಮತ್ತು ವಿತರಣೆಗಾಗಿ ಭಾರತ್ ಬಯೋಟೆಕ್ ಪ್ರಸ್ತುತ ಅಂತರರಾಷ್ಟ್ರೀಯ ಸಂಭಾವ್ಯ ಪಾಲುದಾರರೊಂದಿಗೆ ಚರ್ಚಿಸುತ್ತಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.

ಇನ್‌ಕೋವಾಕ್‌ ಅನ್ನುತುರ್ತು ಪರಿಸ್ಥಿತಿಯಲ್ಲಿ ಮಾತ್ರ ಬಳಸಲು ಅನುಮೋದಿಸಲಾಗಿದೆ. ಲಸಿಕೆ ಪಡೆದವರಿಗೆ ಪ್ರಮಾಣ ಪತ್ರ ಬೇಕಾಗುವುದರಿಂದ, ಕೋವಿನ್‌ ಪೋರ್ಟಲ್‌ನಲ್ಲಿ ಇದನ್ನು ಸೇರಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಇದನ್ನು ಸಕ್ರಿಯಗೊಳಿಸಿದರೆ, ಕೋವಿಡ್ ವಿರುದ್ಧದ ಪ್ರತಿರಕ್ಷಣೆಗೆ ಇಂಟ್ರಾನಾಸಲ್ ಲಸಿಕೆ ಪರಿಚಯಿಸಿದ ಕೆಲವೇ ದೇಶಗಳಲ್ಲಿ ಭಾರತವೂ ಒಂದೆನಿಸಲಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ವಾಷಿಂಗ್ಟನ್ ವಿಶ್ವವಿದ್ಯಾಲಯ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿರುವ ವಿಶ್ವದ ಮೊದಲ ಇಂಟ್ರಾನಾಸಲ್ ಕೋವಿಡ್‌–19 ಲಸಿಕೆ ಇನ್‌ಕೋವ್ಯಾಕ್‌ (ಬಿಬಿಬಿ154) ಅನ್ನು 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ತುರ್ತು ಪರಿಸ್ಥಿತಿಯಲ್ಲಿ ನೀಡಲು ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್ (ಡಿಜಿಸಿಐ)ಅನುಮೋದನೆ ಸಿಕ್ಕಿದೆ ಎಂದುಲಸಿಕೆ ತಯಾರಕರು ಸೆ.6 ರಂದು ಘೋಷಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.