ಲಖನೌ: ಕ್ರಿಸ್ಮಸ್ ಹಾಗೂ ಹೊಸ ವರ್ಷದ ವಿರಾಮದ ಬಳಿಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಮಂಗಳವಾರ ಪುನಾರಂಭಗೊಂಡಿತು.
ದೆಹಲಿಯ ಯಮುನಾ ಬಜಾರ್‌ನಿಂದ ಆರಂಭಗೊಂಡ ಯಾತ್ರೆ, ಮಧ್ಯಾಹ್ನದ ಹೊತ್ತಿಗೆ ಲೋನಿ ಮೂಲಕ ಉತ್ತರ ಪ್ರದೇಶಕ್ಕೆ ತಲುಪಿತು. ಈ ವೇಳೆ ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗ (RAW) ಮಾಜಿ ಮುಖ್ಯಸ್ಥ ಅಮರಜೀತ್ ಸಿಂಗ್ ದೌಲತ್ ಹಾಗೂ ಶಿವಸೇನಾದ (ಉದ್ಧವ್ ಠಾಕ್ರೆ ಬಣ)ನಾಯಕಿ ಪ್ರಿಯಾಂಕಾ ಚತುರ್ವೇದಿ ಜತೆಗೂಡಿದರು.
ಇದೇ ವೇಳೆ ಸಮಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಹಾಗೂ ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ ಅವರು, ಯಾತ್ರೆಗೆ ಶುಭ ಹಾರೈಸಿದರು.
ಉತ್ತರ ಪ್ರದೇಶದಲ್ಲಿ ಮೂರು ದಿನ ಸಾಗಲಿರುವ ಯಾತ್ರೆಯು ಜನವರಿ 6 ರಂದು ಮರಳಿ ಹರಿಯಾಣ ಪ್ರವೇಶಿಸಲಿದೆ.
ಯಾತ್ರೆಯು ಪಂಜಾಬ್‌ನಲ್ಲಿ ಜನವರಿ 11 ರಿಂದ 20 ರವರೆಗೆ ಸಾಗಲಿದೆ. ಹಿಮಾಚಲ ಪ್ರದೇಶದಲ್ಲಿ ಒಂದು ದಿನ ನಡೆಯಲಿದೆ.
ನಂತರ ಜನವರಿ 20ರ ಸಂಜೆ ಯಾತ್ರೆ ಜಮ್ಮು ಮತ್ತು ಕಾಶ್ಮೀರ ಪ್ರವೇಶಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.